ಸೊಂಟದ ಭಾಗದ ಬೊಜ್ಜು ಬಹುಬೇಗ ಕರಗಲು ಕೇಳುವುದಿಲ್ಲ. ಅದನ್ನು ಕರಗಿಸುವ ಕೆಲವು ಪಾನೀಯಗಳ ಬಗ್ಗೆ ತಿಳಿಯೋಣ.
ಜೀರಿಗೆ ಕಾಳು ಅಜೀರ್ಣತೆಯನ್ನು ದೂರ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಹಾಗಾಗಿ ಇದನ್ನು ನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಹಿಂದಿನ ರಾತ್ರಿ ಒಂದು ಚಮಚ ಜೀರಿಗೆ ನೆನೆಹಾಕಿ, ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿ.
ಜೀರ್ಣಕ್ಕೆ ಅತ್ಯುತ್ತಮ ಎಂದೇ ಪರಿಗಣಿತವಾಗಿರುವ ಸೋಂಪು ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಹೋಗುವುದು ಮಾತ್ರವಲ್ಲ ಬೊಜ್ಜಿನ ಪ್ರಮಾಣವೂ ಕಡಿಮೆಯಾಗುತ್ತದೆ.
ನಿಂಬೆಹಣ್ಣಿನ ರಸಕ್ಕೆ ಸಕ್ಕರೆ ಬೆರೆಸದೆ ಬೆಚ್ಚಗಿನ ನೀರು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದಲೂ ಉತ್ತಮ ಪರಿಣಾಮ ದೊರೆಯುತ್ತದೆ. ಓಂಕಾಳಿನ ನೀರೂ ಇದೇ ಪ್ರಯೋಜನವನ್ನು ನೀಡುತ್ತದೆ. ಕೊಬ್ಬು ಇಳಿಸಲು ಗ್ರೀನ್ ಟೀ ಸೇವನೆಯೂ ಬಹಳ ಒಳ್ಳೆಯದು.