ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುವುದು ಮಾತ್ರವಲ್ಲ, ಗೃಹ ಪ್ರವೇಶ ಮಾಡುವಾಗ ಕೂಡ ಒಳ್ಳೆಯ ಮುಹೂರ್ತದಲ್ಲಿ ಮಾಡಬೇಕು. ಆಗ ಮಾತ್ರ ಆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ. ಹಾಗಾದ್ರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ಸಮಯದಲ್ಲಿ ಗೃಹ ಪ್ರವೇಶ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ ಗೃಹ ಪೂಜೆಗೆ ಚಿತ್ತ, ಶತಭಿಷಾ, ಸ್ವಾತಿ, ಹಸ್ತಾ, ಪುಷ್ಯ, ಪುನರ್ವಸು, ರೋಹಿಣಿ, ರೇವತಿ, ಮೂಲ, ಶ್ರವಣ, ಉತ್ತರಾಫಲ್ಗುಣಿ, ಧನಿಷ್ಠ, ಉತ್ತರಾಷಾಢ, ಉತ್ತರಾಭಾದ್ರಾ ಈ ಮುಹೂರ್ತ ಶುಭವೆಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರಗಳಲ್ಲಿ ವಾಸ್ತು ಪೂಜೆ ಮಾಡಿದರೆ ಮನೆಯಲ್ಲಿ ಸಂಪತ್ತು ಹರಿಯುತ್ತದೆ. ಲಕ್ಷ್ಮೀದೇವಿ ಸಂತೋಷಗೊಳ್ಳುತ್ತಾಳೆ.
ಬಳಿಕ ಬ್ರಾಹ್ಮಣರ ಪೂಜೆ ಮಾಡಿ ದಕ್ಷಿಣೆ ನೀಡಿ. ನಿಮಗೆ ಸಾಧ್ಯವಾದರೆ ಬ್ರಾಹ್ಮಣರಿಗೆ ಹಸುವನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು. ಹಾಗೇ ಕೊನೆಯಲ್ಲಿ ಕುಟುಂಬದವರಿಗೆ, ಬಂಧು ಬಳಗದವರಿಗೆ ಅನ್ನ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.