ಕೂದಲು ಕೂಡ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಉದ್ದನೆಯ, ನುಣುಪಾದ ಕೂದಲು ತಮ್ಮದಾಗಬೇಕು ಎಂಬ ಆಸೆ ಹೆಣ್ಣು ಮಕ್ಕಳಿಗಿರುವುದು ಸಹಜ.
ಆದರೆ ಈಗಿನ ಕಲುಷಿತ ವಾತಾವರಣ, ಕೆಮಿಕಲ್ ಯುಕ್ತ ಶಾಂಪೂವಿನ ಬಳಕೆಯಿಂದ ಸುಂದರ ಕೂದಲು ಕನಸಿನ ಮಾತೇ ಸರಿ! ಇಲ್ಲಿ ಕೂದಲಿನ ಆರೈಕೆಗೆ ಒಂದಷ್ಟು ಟಿಪ್ಸ್ ಇದೆ ನೋಡಿ.
6 ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡಿ ನೆನೆಸಿ ಬೆಳಿಗ್ಗೆ ನಯವಾದ ಪೇಸ್ಟ್ ತಯಾರಿಸಿ ಅದಕ್ಕೆ 4 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಟ್ಟು ಬಳಿಕ ವಾಶ್ ಮಾಡಿ ಕಂಡೀಷನರ್ ಬಳಸಿ. ಇದನ್ನು ವಾರಕ್ಕೊಮ್ಮೆ ಮಾಡಿ.
ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕೆ….?
ಮೆಂತ್ಯ ಬೀಜ ತಲೆಹೊಟ್ಟಿಗೆ ಉತ್ತಮ ಪರಿಹಾರವಾಗಿದೆ. ಇದನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಮಿಕ್ಸ್ ಮಾಡಿದಾಗ ನೆತ್ತಿಯ ಕಲ್ಮಶಗಳು ನಿವಾರಣೆಯಾಗುತ್ತದೆ. ನಿಂಬೆ ರಸ ಕೂದಲಿನ ಕಿರುಚೀಲವನ್ನು ಬಲಪಡಿಸಲು ಸಹಾಯ ಮಾಡುತ್ತದೆ.