ಕಲಾಕಂದ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ಪ್ರಿಯರಿಗೆ ಇಷ್ಟವಾಗುವ ಖಾದ್ಯ ಇದು. ಇಲ್ಲಿ ಕ್ಯಾರೆಟ್ ನಿಂದ ಸುಲಭವಾಗಿ ಮಾಡುವ ಕಲಾಕಂದ ಕುರಿತ ಮಾಹಿತಿ ಇದೆ. ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
1 ಟೀಸ್ಪೂನ್ – ತುಪ್ಪ, ಕಂಡೆನ್ಸಡ್ ಮಿಲ್ಕ್ – 1 ಟಿನ್, ಕ್ಯಾರೆಟ್ – 1/2 ಕೆಜಿ, ರೋಸ್ ವಾಟರ್ – 1 ಟೀ ಸ್ಪೂನ್, ¾ ಕಪ್ – ಪನ್ನೀರ್, ಪಿಸ್ತಾ – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ.
ಇದಕ್ಕೆ ಕಂಡೆನ್ಸಡ್ ಮಿಲ್ಕ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಪನ್ನೀರ್ ಅನ್ನು ತುರಿದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಗಟ್ಟಿಯಾದ ಹದಕ್ಕೆ ಬರುವವರೆಗೆ ಕೈಯಾಡಿಸಿ.
ನಂತರ ಇದಕ್ಕೆ ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿ. ನಂತರ ತುಪ್ಪ ಸವರಿದ ಒಂದು ತಟ್ಟೆಗೆ ಈ ಮಿಶ್ರಣ ಹಾಕಿ ಮೇಲುಗಡೆ ಪಿಸ್ತಾ ಚೂರು ಹಾಕಿ ಚೆನ್ನಾಗಿ ಸಮತಟ್ಟು ಮಾಡಿಕೊಂಡು ಫ್ರಿಡ್ಜ್ ನಲ್ಲಿ 4 ಗಂಟೆಗಳ ಕಾಲ ಇಟ್ಟು ಬಿಡಿ. ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು ಸವಿಯಿರಿ.