ಸಾರ್ವಜನಿಕರಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ಸಮಗ್ರ ಕವರೇಜ್ ವಿಮೆ ಜಾರಿ ಸಾಧ್ಯತೆ

ಈವರೆಗೆ ಸಾರ್ವಜನಿಕರು ಆರೋಗ್ಯ, ಆಸ್ತಿ ರಕ್ಷಣೆ, ಅಪಘಾತ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವಿಮೆ ಮಾಡಿಸಬೇಕಾಗಿತ್ತು. ಈಗ ಇದಕ್ಕೆ ಅಂತ್ಯ ಹಾಡಲು ನಿರ್ಧರಿಸಲಾಗಿದ್ದು ಈ ಎಲ್ಲ ಕವರೇಜ್ ಗಳನ್ನು ಒಳಗೊಂಡ ಸಮಗ್ರ ಏಕ ವಿಮಾ ಪಾಲಿಸಿ ಪರಿಚಯಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಹತ್ವದ ಹೆಜ್ಜೆ ಇರಿಸಿದ್ದು, ಈ ಕುರಿತಂತೆ ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಮತ್ತು ಲೈಫ್ ಇನ್ಸೂರೆನ್ಸ್ ಕೌನ್ಸಿಲ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಸದ್ಯದಲ್ಲೇ ಸಮಗ್ರ ಕವರೇಜ್ ವಿಮೆ ಪರಿಚಯಿಸಲು ಸಿದ್ಧತೆ ನಡೆದಿದೆ.

ಇದುವರೆಗೂ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವಿಮೆ ಮಾಡಿಸುತ್ತಿದ್ದ ಕಾರಣ ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸುತ್ತಿತ್ತು. ಇದೀಗ ಕೈಗೆಟುಕುವ ಬೆಲೆಯಲ್ಲಿ ಎಲ್ಲವನ್ನು ಕವರ್ ಮಾಡುವ ಒಂದೇ ಪಾಲಿಸಿ ಆರಂಭಿಸಲು ವಿಮಾ ಕಂಪನಿಗಳಿಗೆ ಐಆರ್‌ಡಿಎಐ ಅನುಮೋದನೆ ನೀಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read