ಹಲವಾರು ಬಗೆಯ ಹಲ್ವಾ ತಯಾರಿ ಬಹುತೇಕರಿಗೆ ಗೊತ್ತಿರುತ್ತದೆ. ಆದರೆ ಪಪ್ಪಾಯಿ ಹಲ್ವಾವನ್ನು ಸರಳವಾಗಿ ಹಾಗೂ ಹೆಚ್ಚು ಸಮಯ ಹಿಡಿಯದೆ ತಯಾರಿಸಬಹುದು. ರುಚಿ ರುಚಿಯಾದ ಪಪ್ಪಾಯಿ ಹಲ್ವಾ ಮಾಡುವ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಪಪ್ಪಾಯಿ – 5 ಕಪ್
ಸಕ್ಕರೆ – 6 ಟೇಬಲ್ ಸ್ಪೂನ್
ಹಾಲಿನ ಪುಡಿ – ಎರಡೂವರೆ ಚಮಚ
ತುಪ್ಪ – 4 ಚಮಚ
ಏಲಕ್ಕಿ ಪುಡಿ
ಮಾಡುವ ವಿಧಾನ
ದಪ್ಪ ತಳವಿರುವ ಪಾತ್ರೆಗೆ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ತುರಿದ ಪಪ್ಪಾಯಿ ಹಾಕಿ 10 ನಿಮಿಷ ಬೇಯಿಸಿ. ಹಣ್ಣಿನಿಂದ ರಸ ಬಿಡುವವರೆಗೆ ತಿರುಗಿಸುತ್ತಾ ಇರಿ.
ಪಪ್ಪಾಯಿ ಬೆಂದ ಮೇಲೆ ಸಕ್ಕರೆ ಹಾಕಿ ಪುನಃ ಸೌಟ್ನಿಂದ ತಿರುಗಿಸುತ್ತಾ ಬೇಯಿಸಿ. ತುಪ್ಪ ಬೇರ್ಪಟ್ಟು ಮೇಲ್ಭಾಗದಲ್ಲಿ ತೇಲಬೇಕು.
ಈಗ ಹಾಲಿನ ಪುಡಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಹಲ್ವಾ ರೀತಿ ಗಟ್ಟಿಯಾಗುವವರೆಗೆ ಬೇಯಿಸಿ ನಂತರ ಉರಿಯಿಂದ ಇಳಿಸಿ. ಕೊನೆಯಲ್ಲಿ ಗೋಡಂಬಿಯಿಂದ ಅಲಂಕರಿಸಿ ಪಪ್ಪಾಯಿ ಹಲ್ವಾ ಸವಿಯಲು ನೀಡಿ.