ಖೀರು ಎಂದ ಕೂಡಲೇ ಅನೇಕ ಬಗೆಯ ಖೀರುಗಳು ನೆನಪಾಗುತ್ತವೆ. ಅದರಲ್ಲಿ ವಿಶೇಷವಾಗಿ ಸಬ್ಬಕ್ಕಿ ಖೀರು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ -1/2 ಬಟ್ಟಲು, ಹಾಲು -1/2 ಲೀಟರ್, ಖೋವಾ -50 ಗ್ರಾಂ, ಸಕ್ಕರೆ -1 ಬಟ್ಟಲು, ಏಲಕ್ಕಿ ಪುಡಿ, ಕೇಸರಿ –ಸ್ವಲ್ಪ, ಲವಂಗ -4, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ -50 ಗ್ರಾಂ.
ರುಬ್ಬಲು ಬೇಕಾದ ಪದಾರ್ಥಗಳು:
ಗೋಡಂಬಿ -50 ಗ್ರಾಂ, ತೆಂಗಿನ ಕಾಯಿ -1/4 ಬಟ್ಟಲು, ಗಸಗಸೆ -1 ಚಮಚ.
ತಯಾರಿಸುವ ವಿಧಾನ:
ಮೊದಲಿಗೆ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ಸಬ್ಬಕ್ಕಿಯನ್ನು ಹುರಿದುಕೊಳ್ಳಿ. ಒಂದೂವರೆ ಬಟ್ಟಲಿನಷ್ಟು ನೀರು ಸೇರಿಸಿ ಬೆಂದ ಬಳಿಕ ಸಕ್ಕರೆ, ಖೋವಾ, ರುಬ್ಬಿದ ಮಿಶ್ರಣ, ಏಲಕ್ಕಿ ಪುಡಿ, ಕೇಸರಿ, 1 ಬಟ್ಟಲು ಹಾಲು ಸೇರಿಸಿ ಚೆನ್ನಾಗಿ ಬೇಯಿಸಿರಿ.
ಕೊನೆಯಲ್ಲಿ ಉಳಿದ ಹಾಲು, ದ್ರಾಕ್ಷಿ, ಗೋಡಂಬಿ ಸೇರಿಸಿರಿ. ಸಬ್ಬಕ್ಕಿ ಖೀರು ರೆಡಿಯಾದ ಬಳಿಕ ರುಚಿಯನ್ನು ಸವಿಯಿರಿ.