ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನ ನೀಡುವ ಅನೇಕ ಪದಾರ್ಥಗಳು ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಲ್ಲಿವೆ. ಜೇನುತುಪ್ಪ ಕೂಡ ಇವುಗಳಲ್ಲೊಂದು. ಇದು ಅನೇಕ ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಸಾವಿರಾರು ವರ್ಷಗಳಿಂದ ಜೇನುತುಪ್ಪವನ್ನು ನೈಸರ್ಗಿಕ ಸಕ್ಕರೆಯಾಗಿ ಬಳಸಲಾಗುತ್ತದೆ. ಇಂದಿಗೂ ಅನೇಕ ಜನರು ಸಕ್ಕರೆಯ ಬದಲಿಗೆ ಇದನ್ನು ಸೇವಿಸುವುದು ಉತ್ತಮವೆಂದು ಪರಿಗಣಿಸುತ್ತಾರೆ. ಆಂಟಿಮೈಕ್ರೊಬಿಯಲ್ ಮತ್ತು ಎಂಟಿಒಕ್ಸಿಡೆಂಟ್ ಗುಣಲಕ್ಷಣಗಳು ಜೇನುತುಪ್ಪದಲ್ಲಿ ಕಂಡುಬರುವುದರಿಂದ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಜೇನುತುಪ್ಪವು ಸಕ್ಕರೆಗಿಂತ ಮಿಲಿಯನ್ ಪಟ್ಟು ಉತ್ತಮವಾಗಿದೆಯೇ ?
ವಾಸ್ತವವಾಗಿ ಸಕ್ಕರೆ ಮತ್ತು ಜೇನುತುಪ್ಪ ಎರಡನ್ನೂ ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಿಂದ ತಯಾರಿಸಲಾಗುತ್ತದೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಜೇನುತುಪ್ಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಸಕ್ಕರೆ ದೇಹಕ್ಕೆ ಮಧುಮೇಹ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳನ್ನು ನೀಡುತ್ತದೆ. ಸಕ್ಕರೆಗಿಂತ ಜೇನುತುಪ್ಪ ಏಕೆ ಉತ್ತಮ ಎಂದು ತಿಳಿಯೋಣ.
ಸಕ್ಕರೆಗಿಂತ ಜೇನುತುಪ್ಪ ಏಕೆ ಉತ್ತಮ ?
ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ: ಅನೇಕ ಅಗತ್ಯ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಜೇನುತುಪ್ಪದಲ್ಲಿ ಕಂಡುಬರುತ್ತವೆ. ಆದರೆ ಸಕ್ಕರೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಗಿದ್ದು, ಇದು ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಅಮೈನೋ ಆಮ್ಲಗಳು, ಕಿಣ್ವಗಳು, ಜೀವಸತ್ವಗಳು ಮತ್ತು ಖನಿಜಗಳು ಜೇನುತುಪ್ಪದಲ್ಲಿ ಇರುತ್ತವೆ, ಇದು ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಉದಾಹರಣೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು, ಉರಿಯೂತದ ಸಮಸ್ಯೆಯನ್ನು ತೊಡೆದುಹಾಕುವುದು ಮತ್ತು ಗಾಯಗಳನ್ನು ವೇಗವಾಗಿ ಗುಣಪಡಿಸುವುದು ಇತ್ಯಾದಿ.
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್: ಸಕ್ಕರೆಗೆ ಹೋಲಿಸಿದರೆ ಜೇನುತುಪ್ಪದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆಯಾಗಿದೆ. ಅಂದರೆ ಅದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ.
ಉತ್ತಮ ಜೀರ್ಣಕ್ರಿಯೆ: ಜೇನುತುಪ್ಪವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದಿಲ್ಲ. ಏಕೆಂದರೆ ಅದರಲ್ಲಿ ಕಿಣ್ವಗಳು ಇರುತ್ತವೆ, ಇದು ಕಾರ್ಬೋಹೈಡ್ರೇಟ್ಗಳನ್ನು ಒಡೆಯಲು ಕೆಲಸ ಮಾಡುತ್ತದೆ. ಸಕ್ಕರೆಯು ರಕ್ತಪ್ರವಾಹಕ್ಕೆ ಪ್ರವೇಶಿಸಿದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.
ಕಡಿಮೆ ಕ್ಯಾಲೋರಿ: ಜೇನುತುಪ್ಪವು ಸಿಹಿಯಾಗಿದ್ದರೂ, ಅದರಲ್ಲಿರುವ ಕ್ಯಾಲೊರಿಗಳ ಪ್ರಮಾಣವು ಸಕ್ಕರೆಗೆ ಹೋಲಿಸಿದರೆ ತುಂಬಾ ಕಡಿಮೆ. ನೀವು ಕಡಿಮೆ ಕ್ಯಾಲೋರಿ ಜೊತೆಗೆ ಸಿಹಿಯನ್ನು ಬಯಸಿದರೆ ಜೇನುತುಪ್ಪವನ್ನು ನಿಮ್ಮ ಆಹಾರದ ಭಾಗವಾಗಿ ಮಾಡಬಹುದು.
ಶಕ್ತಿ ಬೂಸ್ಟರ್: ನೈಸರ್ಗಿಕ ಸಕ್ಕರೆಗಳಾದ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಜೇನುತುಪ್ಪದಲ್ಲಿ ಕಂಡುಬರುತ್ತವೆ. ಇವುಗಳನ್ನು ವಾಸ್ತವವಾಗಿ ಶಕ್ತಿ ವರ್ಧಕವೆಂದು ಪರಿಗಣಿಸಲಾಗುತ್ತದೆ. ಇದು ದೇಹದಿಂದ ಸುಲಭವಾಗಿ ಹೀರಲ್ಪಡುತ್ತದೆ ಮತ್ತು ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ಸಕ್ಕರೆಯನ್ನು ಹೀರಿಕೊಳ್ಳಲು ದೇಹವು ಮೊದಲು ಅದನ್ನು ಫ್ರಕ್ಟೋಸ್ ಮತ್ತು ಗ್ಲೂಕೋಸ್ ಆಗಿ ವಿಭಜಿಸಬೇಕು.
ಚರ್ಮಕ್ಕೆ ಪ್ರಯೋಜನಕಾರಿ: ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇದು ಮೊಡವೆಗಳು, ಊತದಂತಹ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತದೆ. ಹೆಚ್ಚು ಸಕ್ಕರೆ ತಿನ್ನುವಾಗ ಗ್ಲೈಕೇಶನ್ ಸಮಸ್ಯೆಗಳು ಉಂಟಾಗಬಹುದು.