ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದ ಬಿಜೆಪಿ ಕ್ಷಮಾಪಣೆ ಕೋರಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿರುವ ಮಹುವಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಲಾಗಿದ್ದು, ಅದರ ವಿಡಿಯೋ ವೈರಲ್ ಆದ ಮೇಲೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಈಗ ಸಂಸತ್ತಿನಲ್ಲಿ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಂಸದೆ ಮೊಯಿತ್ರಾ, ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದ ರಾಮ್ ಮೋಹನ್ ನಾಯ್ಡು ಕಿಂಜರಾಪು ಮಾತನಾಡುವಾಗ ಅವರು ‘ಹರಾ…..’ ಎಂದು ಹಿಂದಿಯಲ್ಲಿ ಹೇಳುತ್ತಾರೆ.
ಎಂಪಿ ಮೊಯಿತ್ರಾ ಅವರು ಬಜೆಟ್ ಅಧಿವೇಶನದಲ್ಲಿ ಸದನದದಲ್ಲಿ ವಾಗ್ದಾಳಿ ನಡೆಸಿದರು. ಎಂಪಿ ಮೊಯಿತ್ರಾ ಬಳಸಿರುವ ಶಬ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ. ಅದೇ ಇನ್ನೊಂದೆಡೆ ಕ್ಷಮಾಪಣೆ ಕೋರುವಂತೆ ಬಿಜೆಪಿ ಪಟ್ಟು ಹಿಡಿದಿದೆ.
https://twitter.com/BefittingFacts/status/1622984670328795138?ref_src=twsrc%5Etfw%7Ctwcamp%5Etweetembed%7Ctwterm%5E1622984670328795138%7Ctwgr%5E831afcdd0385fcfd05df561b3538b254b90d0829%7Ctwcon%5Es1_&ref_url=https%3A%2F%2Fwww.timesnownews.com%2Findia%2Fwatch-mahua-moitra-uses-abusive-language-in-parliament-hema-malini-says-dont-get-overexcited-article-97720006