ಶುಂಠಿಯಲ್ಲಿ ಅತ್ಯುತ್ತಮ ಆಂಟಿ ಬಯೋಟಿಕ್ ಗಳಿದ್ದು ಇದರ ಸೇವನೆಯಿಂದ ಹಲವು ಆರೋಗ್ಯದ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಆದರೆ ಇದನ್ನು ಸೇವಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ನೀವು ನಿತ್ಯ ಬೆಳಿಗ್ಗೆ ಕುಡಿಯುವ ಕಾಫಿಗೆ ಒಂದು ಚಮಚ ಶುಂಠಿ ರಸ ಸೇರಿಸಿ ಕುಡಿದು ನೋಡಿ. ರುಚಿಯಲ್ಲಿ ಕೊಂಚ ಬದಲಾವಣೆಯಾದರೂ ನಿಮ್ಮ ದೇಹವನ್ನು ದಿನವಿಡೀ ಚೈತನ್ಯಶೀಲರಾಗಿ ಇರುವಂತೆ ಮಾಡುವ ಶಕ್ತಿ ಇದಕ್ಕಿದೆ.
ಚಹಾ ಕುದಿಯುವ ವೇಳೆ ಎಲೆಯೊಂದಿಗೆ ಒಂದಿಂಚು ಗಾತ್ರದ ಶುಂಠಿಯನ್ನು ಜಜ್ಜಿ ಹಾಕಿ. ಕುದಿಸಿ. ಬಳಿಕ ಸೋಸಿ ಕುಡಿಯಿರಿ. ಇದರಿಂದ ಹಲವು ಔಷಧೀಯ ಗುಣಗಳ ಲಾಭ ನಿಮ್ಮದಾಗುತ್ತದೆ. ಶೀತ ಕಫದಂತ ಸಮಸ್ಯೆಗಳೂ ದೂರವಾಗುತ್ತವೆ.
ಮನೆಯಲ್ಲೇ ಹಣ್ಣುಗಳ ಜ್ಯಾಮ್ ತಯಾರಿಸುವ ವೇಳೆ ಅದಕ್ಕೂ ಶುಂಠಿ ಸೇರಿಸಿ. ಇದರಿಂದ ಬ್ರೆಡ್ ನೊಂದಿಗೆ ಶುಂಠಿಯೂ ನಿಮ್ಮ ದೇಹ ಸೇರಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ.
ಹಣ್ಣುಗಳ ಜ್ಯೂಸ್ ತಯಾರಿಸುವಾಗ ಶುಂಠಿ ರಸ ಸೇರಿಸಿ. ಕೊತ್ತಂಬರಿ ಕಷಾಯ ತಯಾರಿಸಿದರೂ ಶುಂಠಿ ಸೇರಿಸಿ ಕುದಿಸಿ. ಒಣಶುಂಠಿ ಪುಡಿಯನ್ನು ಆಹಾರದಲ್ಲಿ ಬಳಸಿ. ನಿಮ್ಮ ಹಲವು ಸಮಸ್ಯೆಗಳಿಗೆ ಇದು ರಾಮಬಾಣವಾಗುವುದು ಖಚಿತ.