ಈ ರಾಶಿಯವರಿಗಿದೆ ಇಂದು ವ್ಯಾಪಾರ ವ್ಯವಹಾರದಲ್ಲಿ ಲಾಭ

ಮೇಷ : ಇತರರಿಗೆ ನೀವು ಮಾಡುವ ಸಹಾಯವು ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಗಳಿಸಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಇಂದು ಸಾಮಾನ್ಯವಾಗಿ ಇರಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ.

ವೃಷಭ : ಉದ್ಯಮದಲ್ಲಿ ಆರ್ಥಿಕ ಚೇತರಿಕೆ ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಕಂಡುಬರಲಿದೆ.  ಬಹುದಿನಗಳಿಂದ ಸಾಧಿಸಬೇಕು ಎಂದುಕೊಂಡಿದ್ದ ವಿಚಾರವನ್ನು ನೀವು ಇಂದು ಸಾಧಿಸಲಿದ್ದೀರಿ.

ಮಿಥುನ : ಪಿತ್ರಾರ್ಜಿತ ಆಸ್ತಿಯ ರೂಪದಲ್ಲಿ ಕೃಷಿ ಭೂಮಿ ನಿಮ್ಮ ಪಾಲಾಗಲಿದೆ. ಎಲೆಕ್ಟ್ರಾನಿಕ್​ ಉದ್ಯಮಿಗಳು, ಜವಳಿ ವ್ಯಾಪಾರಿಗಳಿಗೆ ಇದು ಶುಭ ದಿನ. ಹಲ್ಲು ನೋವು ನಿಮ್ಮನ್ನು ಕಾಡಬಹುದು. ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ.

ಕಟಕ : ಪೋಷಕರ ಹಿತವಚನ ನಿಮಗೆ ಸರಿಯಾದ ಮಾರ್ಗ ತೋರಿಸಲಿದೆ. ರಾಜಕೀಯ ವ್ಯಕ್ತಿಗಳು ವಿವಾದಕ್ಕೀಡಾಗಲಿದ್ದಾರೆ. ಅನಗತ್ಯ ಖರ್ಚು ಮಾಡೋದನ್ನು ನಿಲ್ಲಿಸಿ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಸಿಂಹ : ಮಹಿಳೆಯರಿಗೆ ಕಚೇರಿ ಕೆಲಸದಲ್ಲಿ ಉನ್ನತಿ ಸಿಗಲಿದೆ. ನಿಮ್ಮ ತಾಳ್ಮೆಯ ಬುದ್ಧಿಯು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ. ಜವಳಿ ವ್ಯಾಪಾರಿಗಳಿಗೆ ಇಂದು ನಷ್ಟದ ದಿನವಾಗಿದೆ. ಕುಟುಂಬದಲ್ಲಿ ಚಿಕ್ಕ ಚಿಕ್ಕ ವಿಚಾರದಲ್ಲಿ ಕಿರಕಿರಿ ಉಂಟಾಗಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿದೆ.

ಕನ್ಯಾ : ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಇದೆ. ಪತ್ರಿಕಾರಂಗದಲ್ಲಿ ಇರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸಾಲ ಕೊಡುವ ಮುನ್ನ ನೂರು ಬಾರಿ ಯೋಚಿಸಿ.

ತುಲಾ : ಕೃಷಿಕರು ಅನಿರೀಕ್ಷಿತ ಲಾಭ ಗಳಿಸಲಿದ್ದಾರೆ. ಜಟಿಲವಾದ ಸಮಸ್ಯೆ ಪರಿಹಾರಕ್ಕಾಗಿ ದೇವರ ಮೊರೆ ಹೋಗಲಿದ್ದೀರಿ. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರಲಿದೆ. ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕಕ್ಕೆ ವಿದೇಶಕ್ಕೆ ಹಾರಲಿದ್ದಾರೆ.

ವೃಶ್ಚಿಕ : ವ್ಯವಹಾರದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ನೇಹಿತರು ಹೆಗಲು ನೀಡಲಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಆಗಬೇಕಾದ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಕಲಹ ಏರ್ಪಡಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಧನು : ಮನೆಯ ಪೀಠೋಪಕರಣಗಳ ಖರೀದಿಗಾಗಿ ಧನವ್ಯಯವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದ್ದರೂ ಅದರ ಜೊತೆಯಲ್ಲಿ ಖರ್ಚು ಕೂಡ ಹೆಚ್ಚೇ ಇರೋದ್ರಿಂದ ಅಷ್ಟೇನು ಸಮಾಧಾನ ಇರೋದಿಲ್ಲ. ಗೃಹ ನಿರ್ಮಾಣ ಕಾರ್ಯ ಭರದಿಂದ ಸಾಗಲಿದೆ. ಸಂಗಾತಿಯ ಜೊತೆ ಒಳ್ಳೆಯ ಹೊಂದಾಣಿಕೆ ಇರಲಿದೆ.

ಮಕರ : ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಆದರೂ ದೂರ ಪ್ರಯಾಣ ಬೇಡ. ಭೂ ವ್ಯಾಜ್ಯವನ್ನು ಸರಿಪಡಿಸಲು ಪ್ರಭಾವಿ ವ್ಯಕ್ತಿಗಳ ಸಹಾಯವನ್ನು ಪಡೆಯಲಿದ್ದೀರಿ. ವೈದ್ಯಕೀಯ ಸಲಕರಣೆ ಮಾರಾಟ ಮಾಡುವವರಿಗೆ ಲಾಭವಿದೆ.

ಕುಂಭ : ದಾಯಾದಿಯೊಂದಿಗಿನ ಆಸ್ತಿ ವ್ಯಾಜ್ಯವು ಇತ್ಯರ್ಥವಾಗಲಿದೆ. ಪರಿಸ್ಥಿತಿಯು ನಿಮ್ಮ ಪರವಾಗಿಯೇ ಇರೋದ್ರಿಂದ ಯಶಸ್ಸನ್ನು ಗಳಿಸುತ್ತೀರಿ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತಿ ಇದೆ.

ಮೀನ : ಸಹೋದ್ಯೋಗಿಗಳ ಜೊತೆ ತಾಳ್ಮೆಯಿಂದ ವ್ಯವಹರಿಸಿ. ಚಾಡಿ ಮಾತುಗಳಿಗೆ ಬೆಲೆ ನೀಡಬೇಡಿ. ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹಾಲಿನ ಉತ್ಪನ್ನ ಮಾರಾಟಗಾರರಿಗೆ ಲಾಭವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read