ಕೆಲವು ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನದಿಂದಾಗಿ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಈ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಪಾರ್ಲರ್ ಗೆ ಹೋಗಿ ಅಧಿಕ ಹಣ ನೀಡಿ ಇದನ್ನು ಥ್ರೆಡ್ಡಿಂಗ್ ಮತ್ತು ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಾರೆ. ಅದರ ಬದಲು ಮನೆಯಲ್ಲಿಯೇ ವ್ಯಾಕ್ಸಿಂಗ್ ಮಾಡಿಕೊಳ್ಳಿ.
ಸಕ್ಕರೆ 7 ಚಮಚ, ನಿಂಬೆ ರಸ ½ ಚಮಚ, ಜೇನುತುಪ್ಪ 3 ಚಮಚ, ನೀರು 4 ಚಮಚ ಈ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಕ್ಕರೆ ಕರಗುವವರೆಗೂ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಸಕ್ಕರೆ ತಳಕ್ಕೆ ಅಂಟಿಕೊಳ್ಳದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ತಯಾರಾದ ಮೇಣವನ್ನು ಒಂದು ಕಪ್ ನಲ್ಲಿ ಹಾಕಿಡಿ.
ಮುಖಕ್ಕೆ ಪೌಡರ್ ಹಚ್ಚಿ ಸ್ವಲ್ಪ ಬಿಸಿ ಇರುವ ವ್ಯಾಕ್ಸಿಂಗ್ ಮೇಣವನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಕೈಗಳ ಸಹಾಯದಿಂದ ಕಿತ್ತು ತೆಗೆಯಿರಿ. ಇದರಿಂದ ಕೂದಲು ಕಿತ್ತು ಬರುತ್ತದೆ. ಬಳಿಕ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿ.