‘ವರುಣದೇವ’ ನ ಕೃಪೆಗೆ ಪ್ರಾರ್ಥಿಸಿ ಇಬ್ಬರು ಹುಡುಗರ ನಡುವೆ ಮದುವೆ; ಉತ್ತಮ ಮಳೆಯಾಗಲೆಂದು ಗ್ರಾಮಸ್ಥರ ಹಾರೈಕೆ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದೆ. ಅಷ್ಟೇ ಅಲ್ಲ, ಜೂನ್ ತಿಂಗಳು ಕೊನೆಗೊಳ್ಳುತ್ತಾ ಬಂದರೂ ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಹೀಗಾಗಿ ರೈತರು ಸೇರಿದಂತೆ ಎಲ್ಲರೂ ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ಮುಂದಿನ ದಿನಗಳಲ್ಲಾದರೂ ಉತ್ತಮ ಮಳೆಯಾಗಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ.

ಇದರ ಮಧ್ಯೆ ಹಲವು ಭಾಗಗಳಲ್ಲಿ ತಮ್ಮ ಹಿಂದಿನ ಸಾಂಪ್ರದಾಯಿಕ ಆಚರಣೆಗಳಿಗೆ ಮೊರೆ ಹೋಗಿದ್ದು, ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಗಂಗೇನಹಳ್ಳಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ, ಸಾಂಕೇತಿಕವಾಗಿ ಇಬ್ಬರು ಹುಡುಗರ ನಡುವೆ ಮದುವೆ ಮಾಡಿಸಿದ್ದಾರೆ. ಇದರ ಜೊತೆಗೆ ಆಗಮಿಸಿದವರಿಗೆ ಔತಣ ಕೂಟವನ್ನೂ ಸಹ ನೀಡಿದ್ದಾರೆ.

ಶುಕ್ರವಾರ ರಾತ್ರಿ ಈ ಸಾಂಕೇತಿಕ ವಿವಾಹ ನೆರವೇರಿದ್ದು, ನೈಜ ಮದುವೆಗಳಲ್ಲಿ ನಡೆಯುವಂತೆ ಎಲ್ಲ ವಿಧಿ ವಿಧಾನಗಳು ಸಂಪ್ರದಾಯ ಬದ್ಧವಾಗಿ ನೆರವೇರಿದೆ. ವಧು – ವರನ ವೇಷದಲ್ಲಿದ್ದ ಹುಡುಗರ ಮದುವೆ ಮಾಡಿಸಿದ ಗ್ರಾಮಸ್ಥರು ಉತ್ತಮ ಮಳೆಯಾಗಲೆಂದು ವರುಣದೇವನನ್ನು ಪ್ರಾರ್ಥಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read