ಯೋಗಾಸನಗಳಿಂದ ಸರ್ವ ರೋಗಕ್ಕೂ ಔಷಧ ದೊರೆಯುತ್ತದೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ.
ನಿತ್ಯ ಅಜೀರ್ಣ ಸಂಬಂಧಿ ಸಮಸ್ಯೆ ಇರುವವರು ಈ ಯೋಗಾಸನವನ್ನು ನಿತ್ಯ ಮಾಡಿದರೆ ಸಾಕು, ನಿಮ್ಮ ಜೀರ್ಣ ಸಂಬಂಧಿ ಸಮಸ್ಯೆಗಳು ತಕ್ಷಣ ದೂರವಾಗುತ್ತವೆ.
ಹೊಟ್ಟೆಯುಬ್ಬರ, ಮಲಬದ್ಧತೆ, ಅಲ್ಸರ್ ಸಮಸ್ಯೆ ದೂರ ಮಾಡಲು ವಜ್ರಾಸನ ಹೇಳಿ ಮಾಡಿಸಿದ ಆಸನ. ಇದು ನೀವು ಸೇವಿಸುವ ಆಹಾರವನ್ನು ಜೀರ್ಣ ಮಾಡಿ ಜಠರ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
ಕಾಲುಗಳನ್ನು ಮುಂದಕ್ಕೆ ಚಾಚಿ ನೇರವಾಗಿ ಕುಳಿತುಕೊಳ್ಳಿ, ಬಳಿಕ ಒಂದೊಂದೇ ಕಾಲುಗಳನ್ನು ಹಿಂದಕ್ಕೆ ಮಡಿಚಿ. ಕೈಗಳನ್ನು ತೊಡೆಯ ಮೇಲಿಟ್ಟು ನಿಧಾನವಾಗಿ ಉಸಿರು ಬಿಡಿ. ಇದರಿಂದ ರಕ್ತ ಸಂಚಾರ ಸುಗಮಗೊಳ್ಳುತ್ತದೆ.
ಊಟವಾದ ಬಳಿಕ ಒಂದು ನಿಮಿಷ ಈ ಆಸನದಲ್ಲಿ ಕುಳಿತುಕೊಳ್ಳಿ. ಇದರಿಂದ ಬೆನ್ನುಮೂಳೆಗೂ ವ್ಯಾಯಾಮ ಸಿಕ್ಕಿ ಸ್ನಾಯುಗಳು ಬಲವಾಗುತ್ತವೆ. ತೊಡೆಯ ಕೊಬ್ಬು ಕರಗುತ್ತದೆ. ಮೊಣಕಾಲಿನ ನೋವು ಕೂಡಾ ಕಡಿಮೆಯಾಗುತ್ತದೆ. ಮನೆಯಲ್ಲಿ ಹಿರಿಯರಿದ್ದರೆ ಅವರಿಗೂ ಈ ಸರಳ ಯೋಗಾಸನ ಕಲಿಸಿ, ಜೀರ್ಣ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.