ಬೇಕಾಗುವ ಸಾಮಾಗ್ರಿಗಳು:
ಮಾವಿನಹಣ್ಣು – 1 ಕಪ್, ಕೊಬ್ಬರಿ ತುರಿ – ಅರ್ಧ ಕಪ್, ಹಾಲು – ಒಂದು ಕಪ್, ಸಕ್ಕರೆ – ಅರ್ಧ ಕಪ್, ತುಪ್ಪ – ಸ್ವಲ್ಪ, ದ್ರಾಕ್ಷಿ, ಗೋಡಂಬಿ
ಮಾಡುವ ವಿಧಾನ:
ಸಿಪ್ಪೆ ತೆಗೆದ ಮಾವಿನಹಣ್ಣು ಹಾಗೂ ಸ್ವಲ್ಪ ಹಾಲು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬಳಿಕ ಇನ್ನೊಂದು ಪ್ಯಾನ್ ನಲ್ಲಿ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಕರಗಿಸಿಕೊಳ್ಳಿ. ಸಕ್ಕರೆ ಕರಗಿದ ನಂತರ ಹಾಲು ಸೇರಿಸಿ. ಹಾಲು ಕುದಿ ಬಂದ ಮೇಲೆ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿ. ಬೇಕಿದ್ದರೆ ಫುಡ್ ಕಲರ್ ಹಾಕಬಹುದು. ಚೆನ್ನಾಗಿ ಕುದಿ ಬಂದಾಗ ರುಬ್ಬಿಟ್ಟ ಮಾವಿನಹಣ್ಣಿನ ಪ್ಯೂರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೈಬಿಡದೆ ಸೌಟ್ ನಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು.
ಗಟ್ಟಿಯಾಗುತ್ತಾ ಬರುವಾಗ ತುಪ್ಪದಲ್ಲಿ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಸೇರಿಸಿ. ನಂತರ ತುಪ್ಪ ಸವರಿದ ಪ್ಲೇಟ್ ಗೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಸೆಟ್ ಮಾಡಿಕೊಳ್ಳಿ. 2 ಗಂಟೆ ಹಾಗೆ ಬಿಟ್ಟು ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ಸವಿಯಲು ರುಚಿಯಾದ ಮಾವಿನಹಣ್ಣಿನ ಬರ್ಫಿ ರೆಡಿ.