ಹರಿಯುವ ನೀರಿನೊಂದಿಗೆ ಸಾಹಸ ಮಾಡುವುದೇ ಮೋಜು. ಆದರೆ ಅದು ಅಷ್ಟು ಸುಲಭವಲ್ಲ. ಹಾಗಂತ ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸಿದರೆ ಅದು ಕೂಡ ಕಷ್ಟವಲ್ಲ. ಇತ್ತೀಚೆಗೆ ನೀರಿರುವ ಪ್ರವಾಸಿ ತಾಣಗಳಲ್ಲಿ ಖ್ಯಾತವಾಗುತ್ತಿರುವುದು ರಿವರ್ ರಾಪೆಲ್ಲಿಂಗ್. ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಖ್ಯಾತವಾಗುತ್ತಿವೆ.
ರಿವರ್ ರಾಪೆಲ್ಲಿಂಗ್ ಅಂದರೆ ಸಣ್ಣ ಸಣ್ಣ ಜಲಪಾತ ಅಥವಾ ತೊರೆಗಳ ಹತ್ತಿರದಲ್ಲಿರುವ ಬಂಡೆಯ ಮೇಲಿಂದ ಹಗ್ಗದ ಮೂಲಕ ಸಾಹಸ ಮಾಡುವುದು.
ಬೆಟ್ಟವನ್ನು ಹತ್ತುವಾಗ ಹಗ್ಗವನ್ನು ಬಳಸಿ ಹೇಗೆ ಏರುತ್ತೇವೆಯೋ ಹಾಗೆ ಬೆಟ್ಟದಿಂದ ಹರಿಯುವ ನೀರಿನೊಂದಿಗೆ ಇಳಿಯಬಹುದು. ಆದರೆ ಒಂದಿಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಅಪಾಯದ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಅನುಸರಿಸಿ.
* ಇಂತಹ ಸಾಹಸ ಕ್ರೀಡೆಗೆ ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧರಾಗಿರಬೇಕು. ಸಾಹಸ ಕ್ರೀಡೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಿ.
* ಧುಮ್ಮಿಕ್ಕುವ ನೀರಿನೊಂದಿಗೆ ಇಳಿಯುವ ಮುನ್ನ ಧೈರ್ಯ ಜೊತೆಗಿರಬೇಕು ಎಂಬುದು ಮುಖ್ಯ.
* ರಭಸವಾಗಿ ಧುಮ್ಮಿಕ್ಕುವ ಜಲಪಾತಗಳ ಬದಲಾಗಿ ಸಣ್ಣ ತೊರೆಯಲ್ಲಿ ಇಂತಹ ಸಾಹಸ ಕೈಗೊಳ್ಳುವುದು ಒಳ್ಳೆಯದು.
* ಮೊದಲು ಇಳಿಯಲು ಬೇಕಾದ ಸಾಮಾಗ್ರಿಗಳು ಸರಿಯಾಗಿವೆಯೇ ಎಂದು ಗಮನಿಸಿ. ಬಳಸುವ ಹಗ್ಗ ಗಟ್ಟಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
* ಕೆಲವೊಮ್ಮೆ ಜಲಪಾತದ ಮೇಲಿನ ತುದಿಯನ್ನು ತಲುಪಿರುತ್ತೇವೆ ಮತ್ತು ಅಲ್ಲಿಂದ ಹಗ್ಗದ ಮೂಲಕ ಕೆಳಗೆ ಇಳಿಯುವುದೇ ಸುಲಭ ಮಾರ್ಗ.