ಯಾವುದೇ ಕಾರಣಕ್ಕೂ ನಕರಾತ್ಮಕ ಶಕ್ತಿ ಸೆಳೆಯುವ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ…..!

ನಾವು ಎಷ್ಟೇ ಜಾಗರೂಕರಾಗಿ ಇದ್ದರೂ ಸಹ ಕೆಲವೊಮ್ಮೆ ನಮ್ಮ ಅರಿವಿಗೆ ಬಾರುವ ಮುನ್ನವೇ ದೇವರ ಮೂರ್ತಿ ಅಥವಾ ಫೋಟೋಗಳು ಬಿರುಕು ಬಿಟ್ಟುಬಿಡುತ್ತವೆ. ಆದರೆ ಅನೇಕರು ಈ ಬಿರುಕಿನ ಬಗ್ಗೆ ಹೆಚ್ಚು ಮಹತ್ವ ನೀಡದೇ ಅದೇ ಫೋಟೋವನ್ನ ಪೂಜೆ ಮಾಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದನ್ನ ತಪ್ಪು ಎಂದು ಪರಿಗಣಿಸಲಾಗಿದೆ.

ಬಿರುಕುಬಿಟ್ಟ ಅಥವಾ ತುಂಡಾದ ದೇವರ ವಿಗ್ರಹಗಳು ಮನೆಯ ಒಳಗೆ ಇರೋದನ್ನ ಅಪಶಕುನ ಎಂದು ಹೇಳಲಾಗುತ್ತದೆ. ಇಂತಹ ಫೋಟೋ ಅಥವಾ ವಿಗ್ರಹಗಳನ್ನ ಆದಷ್ಟು ಬೇಗ ನೀರಿನಲ್ಲಿ ವಿಸರ್ಜನೆ ಮಾಡಿ ಅಥವಾ ಅಶ್ವತ್ಥ ಮರದ ಕೆಳಗೆ ಇಡಿ. ಹಾಳಾದ ದೇವರ ವಿಗ್ರಹಗಳು ಮನೆಯಲ್ಲಿ ನಕರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

ಕೇವಲ ದೇವರ ವಿಗ್ರಹ ಮಾತ್ರವಲ್ಲದೇ ಹಾಳಾದ ಬಲ್ಬ್​​ಗಳನ್ನೂ ಮನೆಯಲ್ಲಿ ಇಟ್ಟುಕೊಳ್ಳೋದು ವಾಸ್ತು ಶಾಸ್ತ್ರದ ಪ್ರಕಾರ ಅಪಶಕುನ ಎಂದು ಹೇಳಲಾಗುತ್ತದೆ. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಆರ್ಥಿಕವಾಗಿ ಕಷ್ಟ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ವಸ್ತುಗಳನ್ನ ಮನೆಯಲ್ಲಿ ಇಡಲೇಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read