ರಿಲಯನ್ಸ್ ರಿಟೇಲ್ ಹೊಸ JioBook 4G ಅನ್ನು ಪರಿಚಯಿಸಿದೆ. ವಿಶೇಷವೆಂದರೆ ಇದು JioBook Groupನ ಸ್ವಂತ ಆಪರೇಟಿಂಗ್ ಸಿಸ್ಟಮ್ JioOS ಅನ್ನು ಆಧರಿಸಿದೆ. ಇದು ಎಲ್ಲಾ ವಯಸ್ಸಿನವರಿಗೆ ಉಪಯುಕ್ತವೆಂದು ಕಂಪನಿ ಹೇಳಿಕೊಂಡಿದೆ. ಇದರ ಬೆಲೆ 16,499 ರೂಪಾಯಿ. ಗ್ರಾಹಕರು ಜಿಯೋ ಬುಕ್ ಅನ್ನು ಆಗಸ್ಟ್ 5 ರಿಂದ ಖರೀದಿಸಬಹುದು. JioBook ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್ ಬಿಲ್ಟ್ ಮತ್ತು ಕಡಿಮೆ ತೂಕದ (990 ಗ್ರಾಂ) ಸೊಗಸಾದ ವಿನ್ಯಾಸವನ್ನು ಹೊಂದಿದೆ.
ಸ್ಲಿಮ್ ಆಗಿದ್ದರೂ, JioBook 4G ಉತ್ತಮ ಔಟ್‌ಪುಟ್ ನೀಡುತ್ತದೆ. ಇದು 2.0 GHz ಆಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64 GB (SD ಕಾರ್ಡ್‌ನೊಂದಿಗೆ 256 GB ವರೆಗೆ ವಿಸ್ತರಿಸಬಹುದಾದ) ಸ್ಟೋರೇಜ್, ಇನ್ಫಿನಿಟಿ ಕೀಬೋರ್ಡ್, ದೊಡ್ಡ ಮಲ್ಟಿ-ಗೆಸ್ಚರ್ ಟ್ರ್ಯಾಕ್‌ಪ್ಯಾಡ್ ಮತ್ತು ಅಂತರ್ನಿರ್ಮಿತ USB/HDMI ಪೋರ್ಟ್ ಅನ್ನು ಹೊಂದಿದೆ. JioBook ಅನ್ನು ರಿಲಯನ್ಸ್ ಡಿಜಿಟಲ್‌ನಿಂದ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಅಂಗಡಿಗಳು ಹಾಗೂ Amazon.in ಮೂಲಕವೂ ಖರೀದಿಸಬಹುದು.
JioBookನ ಹಾರ್ಡ್‌ವೇರ್ ವಿಶೇಷತೆ
– ಆಧುನಿಕ ಆಪರೇಟಿಂಗ್ ಸಿಸ್ಟಮ್
– JioOS-4G ಮತ್ತು ಡ್ಯುಯಲ್-ಬ್ಯಾಂಡ್ ವೈಫೈ ಸಂಪರ್ಕ
-ಅಲ್ಟ್ರಾ ಸ್ಲಿಮ್, ಸೂಪರ್ ಲೈಟ್ (990 ಗ್ರಾಂ) ಮತ್ತು ಆಧುನಿಕ ವಿನ್ಯಾಸ
– ಸುಗಮ ಮಲ್ಟಿಟಾಸ್ಕ್‌ಗಾಗಿ ಶಕ್ತಿಯುತ ಆಕ್ಟಾ-ಕೋರ್ ಚಿಪ್‌ಸೆಟ್
-11.6 ಇಂಚಿನ (29.46 cm) ಆಂಟಿ-ಗ್ಲೇರ್ HD ಡಿಸ್‌ಪ್ಲೇ
– ಇನ್ಫಿನಿಟಿ ಕೀಬೋರ್ಡ್, ದೊಡ್ಡ ಮಲ್ಟಿಹು-ಗೆಸ್ಚರ್ ಟ್ರ್ಯಾಕ್‌ಪ್ಯಾಡ್
-4G-LTE ಮತ್ತು ಡ್ಯುಯಲ್-ಬ್ಯಾಂಡ್ ವೈಫೈ ಸಾಮರ್ಥ್ಯ
– ಸುಲಭ ಇಂಟರ್ಫೇಸ್-75+ ಕೀಬೋರ್ಡ್ ಶಾರ್ಟ್‌ಕಟ್‌ಗಳು-ಟ್ರ್ಯಾಕ್‌ಪ್ಯಾಡ್
– ಸ್ಕ್ರೀನ್ ವಿಸ್ತರಣೆ
– ವೈರ್‌ಲೆಸ್ ಪ್ರಿಂಟಿಂಗ್
– ಮಲ್ಟಿ ಟಾಸ್ಕಿಂಗ್ ಸ್ಕ್ರೀನ್
– ಇಂಟಿಗ್ರೇಟೆಡ್ ಚಾಟ್‌ಬಾಟ್ಜಿಯೋ ಬುಕ್ ಮೂಲಕ ವಿದ್ಯಾರ್ಥಿಗಳು ಕೋಡಿಂಗ್ ಕೂಡ ಕಲಿಯಬಹುದು. JioBook 4G ಇನ್ಫಿನಿಟಿ ಕೀಬೋರ್ಡ್, ಸ್ಟಿರಿಯೊ ವೆಬ್‌ಕ್ಯಾಮ್ , ವೈರ್‌ಲೆಸ್ ಪ್ರಿಂಟಿಂಗ್, ಆಕ್ಟಾಕೋರ್ ಕಾರ್ಯಕ್ಷಮತೆ, ಆಂಟಿ ಗ್ಲೇರ್ ಎಚ್‌ಡಿ ಡಿಸ್‌ಪ್ಲೇ , ಡಿಜಿಬಾಕ್ಸ್‌ನೊಂದಿಗೆ 100 ಜಿಬಿ ಉಚಿತ ಕ್ಲೌಡ್ ಸೇವೆ ಮತ್ತು ಒಂದು ವರ್ಷದವರೆಗೆ ಕ್ವಿಕ್ ಹೀಲ್ ಆಂಟಿವೈರಸ್ ರಕ್ಷಣೆ ಹೀಗೆ ಹಲವು ಫೀಚರ್‌ಗಳನ್ನು ಹೊಂದಿದೆ.