
ಟೀ ಜತೆ ಏನಾದರೂ ಬಿಸ್ಕೇಟ್ ಇದ್ದರೆ ಚೆನ್ನಾಗಿರುತ್ತೆ. ಈಗಂತೂ ಹೊರಗಡೆಯಿಂದ ತಂದು ತಿನ್ನುವ ಕಾಲವಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ ಬಿಸ್ಕೇಟ್. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿಗಳು:
1 ½ ಕಪ್ – ಮೈದಾ ಹಿಟ್ಟು, ½ ಕಪ್ ಕಸ್ಟರ್ಡ್ ಪುಡಿ, 1 ಟೀ ಸ್ಪೂನ್ – ಬೇಕಿಂಗ್ ಪುಡಿ, ½ ಕಪ್ – ಬೆಣ್ಣೆ, 1 ಕಪ್ – ಸಕ್ಕರೆ ಪುಡಿ, ½ ಕಪ್ – ಟೂಟಿ ಫ್ರೂಟಿ, 1 ಟೀ ಸ್ಪೂನ್ – ರೋಸ್ ಎಸೆನ್ಸ್, ¼ ಕಪ್ – ಕತ್ತರಿಸಿದ ಗೋಡಂಬಿ, 6 ಟೇಬಲ್ ಸ್ಪೂನ್ – ಹಾಲು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಮೈದಾ ಹಿಟ್ಟು, ಕಸ್ಟರ್ಡ್ ಪುಡಿ, ಬೇಕಿಂಗ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಬೌಲ್ ಗೆ ಸಕ್ಕರೆ, ಬೆಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕ್ರೀಂ ರೀತಿ ಮಾಡಿಕೊಳ್ಳಿ. ಇದಕ್ಕೆ ಟೂಟಿ ಫ್ರೂಟಿ, ರೋಸ್ ಎಸೆನ್ಸ್ , ಗೋಡಂಬಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಹಿಟ್ಟಿನ ಮಿಶ್ರಣ ಹಾಕಿ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ನಾದಿಕೊಂಡು ಮುದ್ದೆ ರೀತಿ ಕಟ್ಟಿಕೊಳ್ಳಿ. ಈ ಹಿಟ್ಟಿನಿಂದ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆಕಟ್ಟಿ. ಕೈಯಿಂದ ನಿಧಾನಕ್ಕೆ ಒತ್ತಿಕೊಂಡು ಪ್ರಿ ಹೀಟ್ ಮಾಡಿದ ಒವೆನ್ ನಲ್ಲಿ 30 ನಿಮಿಷಗಳ ಕಾಲ ಬೇಕ್ ಮಾಡಿಕೊಂಡು ಸವಿಯಿರಿ.