ಮಹಿಳೆ ಹಸ್ತದಲ್ಲಿ ಈ ರೇಖೆಯಿದ್ರೆ ಆಕೆ ಜೀವನದಲ್ಲಿ ದೊರೆಯಲಿದೆ ಸುಖ-ಶಾಂತಿ, ಸೌಭಾಗ್ಯ

ಸಾಮಾನ್ಯವಾಗಿ ಪ್ರತಿಯೊಬ್ಬರ ಹಸ್ತ ರೇಖೆಗಳು ಬೇರೆ ಬೇರೆಯಾಗಿರುತ್ತವೆ. ಹಸ್ತದಲ್ಲಿರುವ ರೇಖೆಗಳು ಬೇರೆ ಬೇರೆ ಆಕೃತಿ, ಅಕ್ಷರ ರೂಪದಲ್ಲಿರುತ್ತವೆ.

ಹಸ್ತದ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ನಂಬಲಾಗಿದೆ. ರೇಖೆಗಳು ಭೂತ, ವರ್ತಮಾನ, ಭವಿಷ್ಯವನ್ನು ಸೂಚಿಸುತ್ತವೆ. ಹಾಗಾಗಿಯೇ ಕೆಲವರು ಹಸ್ತರೇಖೆ ಭವಿಷ್ಯವನ್ನು ನಂಬುತ್ತಾರೆ.

ಮಹಿಳೆ ಹಾಗೂ ಪುರುಷರ ಹಸ್ತದ ರೇಖೆಗಳು ಒಂದೇ ರೀತಿ ಇರುತ್ತವೆ. ಆದ್ರೆ ಪುರುಷರ ರೇಖೆ ಬೇರೆ ಭವಿಷ್ಯ ಹೇಳಿದ್ರೆ ಮಹಿಳೆಯರ ರೇಖೆ ಬೇರೆ ಭವಿಷ್ಯ ಹೇಳುತ್ತದೆ. ಮಹಿಳೆ ಹಸ್ತದ ರೇಖೆ ಕೆಲವೊಂದು ಆಕೃತಿ ಪಡೆದಿದ್ದರೆ ಅದು ಶುಭವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಮಹಿಳೆಯ ಹಸ್ತದಲ್ಲಿ ಕಮಲದ ಆಕೃತಿ ಮೂಡಿದ್ದರೆ ಅಥವಾ ಮೀನಿನ ಆಕೃತಿಯಿದ್ದರೆ ಆಕೆ ಭವಿಷ್ಯ ಪ್ರಕಾಶಮಾನವಾಗಿರುತ್ತದೆ ಎಂದರ್ಥ. ಜೀವನದಲ್ಲಿ ಎಲ್ಲ ರೀತಿಯ ಸುಖ ಪ್ರಾಪ್ತಿಯಾಗುತ್ತದೆ.

ಮಹಿಳೆ ಕೈನಲ್ಲಿ ಧ್ವಜ ಅಥವಾ ರಥದ ಚಿಹ್ನೆ ಮೂಡಿದ್ದರೆ ಆಕೆ ಪತಿ ದೊಡ್ಡ ಅಧಿಕಾರಿಯಾಗ್ತಾನೆ ಎಂದರ್ಥ.

ಮಹಿಳೆ ಎಡ ಹಸ್ತದ ಮೇಲೆ ಹಕ್ಕಿ ಹಾಗೂ ಬಲ ಹಸ್ತದ ಮೇಲೆ ಆನೆ ಆಕೃತಿ ಮೂಡಿದ್ದರೆ ಆಕೆ ಪತಿ ಜೀವನ ಸುಖಕರವಾಗಿರುತ್ತದೆ ಎಂದರ್ಥ.

ಮಹಿಳೆ ಹಸ್ತದಲ್ಲಿ ಚಕ್ರ ಹಾಗೂ ಶಂಖದ ಆಕಾರವಿದ್ದರೆ ಆಕೆ ಮಗ ದೊಡ್ಡ ಅಧಿಕಾರಿಯಾಗಲಿದ್ದಾನೆ ಹಾಗೂ ಸುಖಕರ ಜೀವನ ಆಕೆಯದಾಗಲಿದೆ ಎಂದರ್ಥ.

ಮಹಿಳೆ ಹಸ್ತದಲ್ಲಿ ತ್ರಿಕೋನ ಅಥವಾ ಧನುಷ್ಯ ಆಕೃತಿ ಇದ್ದರೆ ಆಕೆ ಭಾಗ್ಯಶಾಲಿ ಎಂದರ್ಥ. ಜೀವನದಲ್ಲಿ ಸುಖ-ಶಾಂತಿ, ಸೌಭಾಗ್ಯ ದೊರೆಯಲಿದೆ ಎಂಬುದರ ಸಂಕೇತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read