ಈ ಬಾರಿ ಮಹಾಶಿವರಾತ್ರಿಯ ಉಪವಾಸವನ್ನು ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಶಿವನ ಭಕ್ತರಿಗೆ ಮಹಾಶಿವರಾತ್ರಿಯ ಉಪವಾಸ ಬಹಳ ವಿಶೇಷ. ಅನೇಕರು ಈ ದಿನ ಉಪವಾಸವಿದ್ದು ಈಶ್ವರನನ್ನು ಆರಾಧಿಸುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ವ್ರತದ ಸಮಯದಲ್ಲಿ ಕೆಲವು ನಿರ್ದಿಷ್ಟ ಆಹಾರವನ್ನು ಸೇವಿಸಬೇಕು.
ಸಂಪೂರ್ಣ ಉಪವಾಸವಿದ್ದಾಗ ದೇಹದಲ್ಲಿ ಶಕ್ತಿ ಸೋರಿ ಹೋದಂತೆ ಭಾಸವಾಗುತ್ತದೆ. ದೌರ್ಬಲ್ಯ ಕೂಡ ನಿಮ್ಮನ್ನು ಕಾಡಬಹುದು. ಹಾಗಾಗಿ ವೃತ ಮಾಡಿದರೂ ದಿನವಿಡೀ ಆರಾಮಾಗಿ ಶಕ್ತಿಯುತವಾಗಿ ಇಡುವಂತಹ ಆಹಾರಗಳನ್ನೇ ಸೇವಿಸಿ. ಅವು ಯಾವುವು ಅನ್ನೋದನ್ನು ನೋಡೋಣ.
ಹುರುಳಿ : ಹುರುಳಿಕಾಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹುರುಳಿ ಹಿಟ್ಟು ಕೂಡ ವೃತದಲ್ಲಿ ಸೇವನೆ ಮಾಡಲು ಸೂಕ್ತ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಹುರುಳಿ ಹಿಟ್ಟಿನಿಂದ ನೀವು ಡಂಪ್ಲಿಂಗ್ಸ್, ಹಲ್ವಾ ಮತ್ತು ಪೂರಿಗಳನ್ನು ಮಾಡಬಹುದು.
ಹಣ್ಣುಗಳು: ಹಣ್ಣುಗಳು ದೇಹಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿ. ದೀರ್ಘಕಾಲದವರೆಗೆ ದೇಹವನ್ನು ಹೈಡ್ರೇಟ್ ಆಗಿ ಇಡುವುದರ ಜೊತೆಗೆ ದೇಹವನ್ನು ಆರೋಗ್ಯವಾಗಿಡುತ್ತವೆ. ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ಎನರ್ಜಿ ತುಂಬಿರುತ್ತದೆ. ಮಹಾಶಿವರಾತ್ರಿಯ ಉಪವಾಸದಲ್ಲಿ ಬಾಳೆಹಣ್ಣು, ಸೇಬು, ದ್ರಾಕ್ಷಿಯನ್ನು ಸೇವಿಸಬಹುದು.
ಮಖಾನಾ: ಮಖಾನಾ ಸಾಕಷ್ಟು ಪೋಷಕಾಂಶಗಳುಳ್ಳ ತಿನಿಸು. ಮಹಾಶಿವರಾತ್ರಿಯ ಉಪವಾಸದ ಸಮಯದಲ್ಲಿ ಇದನ್ನು ಸೇವನೆ ಮಾಡಬಹುದು. ಇದು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಮಖಾನಾವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ ಮತ್ತು ದೇಹವು ಸಹ ಆರೋಗ್ಯಕರವಾಗಿರುತ್ತದೆ. ಮಖಾನಾದ ಖೀರ್ ಅಥವಾ ಪಾಯಸ ಮಾಡಿ ಕೂಡ ತಿನ್ನಬಹುದು.