ಮಳೆಗಾಲದಲ್ಲಿ ಗರಮಾ ಗರಂ, ಬಿಸಿಬಿಸಿ ತಿಂಡಿ ತಿನ್ನಲು ಎಲ್ಲರೂ ಬಯಸ್ತಾರೆ. ಅದ್ರಲ್ಲೂ ರುಚಿ ರುಚಿ ಹಪ್ಪಳ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳು ಆಸೆ ಪಟ್ಟು ತಿನ್ನುವ ಪನ್ನೀರ್ ಹಪ್ಪಳ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ.
ಪನ್ನೀರ್ ಪಾಪಡ್ ಮಾಡಲು ಬೇಕಾಗುವ ಸಾಮಾಗ್ರಿ :
4 ಚಮಚ ಟೊಮೋಟೋ ಸಾಸ್
1 ಚಮಚ ಸಾಸಿವೆ ಸಾಸ್
1 ಚಮಚ ಚಿಲ್ಲಿ ಸಾಸ್
1 ಚಮಚ ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಚಮಚ ಕಾರ್ನ್ ಫ್ಲೋರ್
250 ಗ್ರಾಂ ಪನ್ನೀರ್ ಪೀಸ್
10-12 ಪುಡಿ ಮಾಡಿದ ಸಣ್ಣ ಹಪ್ಪಳ
ಕರಿಯಲು ಎಣ್ಣೆ
ಪನ್ನೀರ್ ಪಾಪಡ್ ಮಾಡುವ ವಿಧಾನ :
ಮೊದಲು ಒಂದು ಪಾತ್ರೆಗೆ ಟೊಮೋಟೋ ಸಾಸ್, ಸಾಸಿವೆ ಸಾಸ್, ಚಿಲ್ಲಿ ಸಾಸ್, ಮೆಣಸಿನ ಪುಡಿ, ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತ್ರ ಇದಕ್ಕೆ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ತಯಾರಿಸಿಕೊಂಡು, ಪನ್ನೀರನ್ನು ಹಾಕಿ ಚೆನ್ನಾಗಿ ಕಲಸಿ.
ನಂತ್ರ ಪುಡಿ ಮಾಡಿದ ಹಪ್ಪಳದಲ್ಲಿ ಪನ್ನೀರನ್ನು ಅದ್ದಿ ತೆಗೆದಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಪನ್ನೀರ್ ಹಾಕಿ ಕರಿದರೆ ಪನ್ನೀರ್ ಪಾಪಡ್ ಸಿದ್ಧ.