ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ʼಮನೆಮದ್ದುʼ

ದಿನ ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದು ಒಮ್ಮೆ ಟಾಯ್ಲೆಟ್ ಗೆ ಹೋಗಿ ಬಂದರೆ ಆ ದಿನವೆಲ್ಲಾ ಸಲೀಸಾಗಿ ಮುಗಿದಂತೆ. ಕೆಲವರಿಗೆ ಇದೊಂದು ಸಮಸ್ಯೆಯಾಗಿ ಕಾಡುತ್ತದೆ. ದಿನವೆಲ್ಲಾ ರುಚಿಯಾದುದನ್ನು ತಿನ್ನಲೂ ಆಗದೆ ಒದ್ದಾಡುತ್ತಿರುತ್ತಾರೆ. ಅವರಿಗಾಗಿ ಅತ್ಯುತ್ತಮ ಟಿಪ್ಸ್ ಇಲ್ಲಿದೆ ಕೇಳಿ.

ವಯಸ್ಸಾದಂತೆ ಮಲಬದ್ಧತೆ ಸಮಸ್ಯೆ ಹೆಚ್ಚುವುದು ಒಂದು ಸಾಮಾನ್ಯ ಸಂಗತಿಯಾದರೆ ಕಡಿಮೆ ನೀರು ಕುಡಿಯುವುದೂ ಇದಕ್ಕೊಂದು ಕಾರಣ. ಕೆಲವೊಮ್ಮೆ ನಾವು ಸೇವಿಸಿದ ಆಹಾರದಲ್ಲಿ ನಾರಿನ ಅಂಶ ಕಡಿಮೆಯಾದರೆ ಅದು ಸರಿಯಾಗಿ ಜೀರ್ಣವಾಗದೆ ಅಜೀರ್ಣತೆ ಸಮಸ್ಯೆ ಉಂಟಾಗಬಹುದು. ಆಗಲೂ ಮಲ ಸರಿಯಾಗಿ ವಿಸರ್ಜನೆಯಾಗುವುದಿಲ್ಲ.

ಇದಕ್ಕೆ ಹಲವು ಪರಿಹಾರಗಳಿವೆ. ಸರಿಯಾಗಿ ನೀರು ಕುಡಿಯುವುದು ಬಹಳ ಮುಖ್ಯ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವವರಿಗೆ ಈ ಸಮಸ್ಯೆ ಕಾಡದು. ದೇಹವನ್ನು ದಂಡಿಸಿ ವ್ಯಾಯಾಮ ಮಾಡುವುದರಿಂದ ದೇಹದ ಪ್ರತಿಯೊಂದು ಅಂಗಕ್ಕೂ ಚಲನೆ ಸಿಗುತ್ತದೆ. ನಿಂಬೆ ಜ್ಯೂಸ್ ಕುಡಿಯುವುದು, ತಾಜಾ ಹಣ್ಣಿನ ರಸಗಳನ್ನು ಸೇವಿಸುವುದರಿಂದ ಈ ಸಮಸ್ಯೆ ಕಾಡದು.

ಒಣ ದ್ರಾಕ್ಷಿ ಹಣ್ಣನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಮಾನಸಿಕ ಒತ್ತಡ ಅನುಭವಿಸದಿರಿ. ಅರೋಗ್ಯದ ಮೇಲೆ ನಿಯಂತ್ರಣ ಹೊಂದಿದ್ದರೆ ಯಾವ ಸಮಸ್ಯೆಯೂ ಕಾಡದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read