ಮನೆಯ ಮುಖ್ಯದ್ವಾರದಲ್ಲಿ ಗಣೇಶನ ಪ್ರತಿಮೆಯನ್ನು ಅನೇಕರು ಇಡ್ತಾರೆ. ಸ್ವಸ್ತಿಕ್, ಶುಭ-ಲಾಭ್ ಸೇರಿದಂತೆ ಅನೇಕ ಶುಭ ಸೂಚಕಗಳನ್ನು ಇಡ್ತಾರೆ. ಹಿಂದೂ ಧರ್ಮದಲ್ಲಿ ಗಣೇಶನಿಗೆ ಮಹತ್ವದ ಸ್ಥಾನವಿದೆ. ಮೊದಲ ಪೂಜಿಪ ಗಣೇಶ. ಎಲ್ಲ ಕಾರ್ಯಗಳು ಶುರುವಾಗುವ ಮೊದಲು ಗಣೇಶನ ಪೂಜೆ ನಡೆಯುತ್ತದೆ. ಹಾಗೆ ಮನೆಯ ಮುಖ್ಯದ್ವಾರದಲ್ಲಿ ಗಣೇಶನಿದ್ದರೆ ಶುಭವೆಂದು ಅನೇಕರು ಭಾವಿಸಿದ್ದಾರೆ.
ನಿಮ್ಮ ಮನೆಯ ಮುಖ್ಯದ್ವಾರದ ಬಳಿ ಗಣೇಶನ ಪ್ರತಿಮೆಯಿದ್ರೆ ಅವಶ್ಯವಾಗಿ ಇದನ್ನು ಓದಿ. ಮನೆ ಮುಖ್ಯದ್ವಾರದ ಮುಂದೆ ಗಣೇಶನ ಮೂರ್ತಿ ಇಡುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಮನೆಯ ಒಂದೇ ಸ್ಥಳದಲ್ಲಿ ಎಂದೂ ಎರಡು ಗಣೇಶನ ಮೂರ್ತಿ ಇರಬಾರದು. ಇದು ಪ್ರತಿಮೆಯಲ್ಲಿರುವ ಶಕ್ತಿಯನ್ನು ನಷ್ಟಮಾಡುತ್ತದೆ. ಇದ್ರಿಂದ ಮನೆಯಲ್ಲಿ ದುಃಖಕರ ಘಟನೆಗಳು ನಡೆಯುತ್ತಿರುತ್ತವೆ.
ಮನೆಯಲ್ಲಿ ಎರಡು ಗಣೇಶನ ಮೂರ್ತಿಗಳಿದ್ದರೆ ಒಂದಕ್ಕೊಂದು ಕಾಣದಂತೆ ಇಡಬೇಕು. ಹಾಗೆ ಮನೆಯ ಮುಖ್ಯದ್ವಾರದ ಬಳಿ ಮುಖಹಾಕಿ ಗಣೇಶ ಮೂರ್ತಿಯನ್ನು ಇಡಬಾರದು. ಇದ್ರಿಂದ ಅಶುಭ ಘಟನೆಗಳು ನಡೆಯುತ್ತವೆ. ಗಣೇಶನ ಹಿಂಭಾಗ ಮನೆಯವರಿಗೆ ಕಾಣುವುದು ಶುಭವಲ್ಲ. ಗಣೇಶನ ಹಿಂಭಾಗದಲ್ಲಿ ನೋವು, ದುಃಖಗಳು ನೆಲೆಸಿವೆಯಂತೆ. ಒಂದು ವೇಳೆ ಮನೆ ಮುಖ್ಯದ್ವಾರದ ಬಳಿ ಗಣೇಶನ ಮೂರ್ತಿಯಿದ್ದರೆ ಅದ್ರ ಹಿಂಭಾಗಕ್ಕೆ ಬೇರೆ ಮೂರ್ತಿಯನ್ನು ಇರಿಸಿ. ಗಣೇಶನ ಹಿಂಭಾಗ ನಿಮಗೆ ಕಾಣದಂತೆ ನೋಡಿಕೊಳ್ಳಿ.