ಮಗುವಿಗೆ ಕೊಡುವ ಅನ್ನದ ʼಗಂಜಿʼ ಹೇಗಿರಬೇಕು ಗೊತ್ತೇ…?

ಮಗುವಿಗೆ ಆರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ.

ಇನ್ನೂ ಹಲ್ಲು ಮೂಡಿರದ ಮಗುವಿಗೆ ಗಟ್ಟಿ ಪದಾರ್ಥವನ್ನು ಕೊಡಲು ಸಾಧ್ಯವಿಲ್ಲ. ಹಾಗೆಂದು ಕೇವಲ ದ್ರವಾಹಾರವೂ ಸಾಕಾಗುವುದಿಲ್ಲ. ಈ ಅವಧಿಯಲ್ಲಿ ಕೊಡಬಹುದಾದ ಅತ್ಯುತ್ತಮ ಆಹಾರವೆಂದರೆ ಅನ್ನದ ಗಂಜಿ.

ಹೆಚ್ಚು ಪೌಷ್ಟಿಕಾಂಶಗಳಿರುವ ಗಂಜಿಯನ್ನು ಎಷ್ಟು ಮತ್ತೆ ಹೇಗೆ ಬೇಯಿಸಿ ಮಕ್ಕಳಿಗೆ ಕೊಡಬೇಕು ಎಂಬುದನ್ನು ನೋಡೋಣ. ಅಕ್ಕಿ ಬೇಯಲು ಹಾಕಿದ 15 ನಿಮಿಷಗಳ ಬಳಿಕ ನೊರೆಯ ರೂಪದಲ್ಲಿ ಬಿಳಿ ಬಣ್ಣದ ದಪ್ಪಗಿನ ನೀರು ಮೇಲೆ ಬರುತ್ತದೆ. ಇದನ್ನು ಅನ್ನದ ಗಂಜಿ ಎನ್ನುತ್ತಾರೆ. ಇದು ಪೌಡರ್ ಮಿಶ್ರ ಮಾಡಿದ ನೀರಿನಂತೆ ಕಂಡರೂ ಪುಟ್ಟ ಮಗುವಿಗೆ ಇಷ್ಟು ಸಾಕು. ಹಲ್ಲು ಮೂಡಿರದ ಮಕ್ಕಳಿಗೆ ಇದು ಧಾರಾಳ ಸಾಕು.

ಇದರ ಸೇವನೆಯಿಂದ ದೇಹಕ್ಕೆ ಸಾಕಷ್ಟು ಕಾರ್ಬೋ ಹೈಡ್ರೇಟ್ ಅಂಶಗಳು ಸಿಗುತ್ತವೆ. ಮಗು ಚುರುಕಾಗಿರುವಂತೆ ನೋಡಿಕೊಳ್ಳುತ್ತದೆ. ಸಣ್ಣ ಮಕ್ಕಳ ಆರೋಗ್ಯ ಸೂಕ್ಷ್ಮವಾಗಿರುತ್ತದೆ. ಅವುಗಳಿಗೆ ಅಜೀರ್ಣ ಸಮಸ್ಯೆ ಕಾಡುವುದು ಬಹಳ ಬೇಗ. ಅನ್ನ ಬಸಿದ ಈ ಗಂಜಿ ಯಾವ ಅಡ್ಡ ಪರಿಣಾಮಗಳನ್ನೂ ಬೀರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read