ಸಾಮಾನ್ಯವಾಗಿ ಎಲ್ಲರೂ ರೈಲು ಪ್ರಯಾಣ ಮಾಡಿರ್ತಾರೆ. ಆದರೆ ಕಿಟಕಿ ಮತ್ತು ಬಾಗಿಲುಗಳೇ ಇಲ್ಲದ ರೈಲನ್ನು ನೋಡಿದ್ದೀರಾವ? ಭಾರತೀಯ ರೈಲ್ವೆ ಇಲಾಖೆಯ ಟ್ರೈನ್‌ಗಳಲ್ಲಿ ಕಿಟಕಿ, ಬಾಗಿಲುಗಳೇ ಇಲ್ಲದ ಬೋಗಿಗಳಿವೆ. ಕಿಟಕಿ ಮತ್ತು ಬಾಗಿಲುಗಳಿಲ್ಲದ ರೈಲುಗಳನ್ನು NMG ಕೋಚ್ ಟ್ರೈನ್ ಎಂದು ಕರೆಯಲಾಗುತ್ತದೆ.
ನಾವು ಪ್ರಯಾಣಿಸುವ ಪ್ಯಾಸೆಂಜರ್ ರೈಲುಗಳ ಎಲ್ಲಾ ಬೋಗಿಗಳು ಕೆಲವೇ ವರ್ಷಗಳಲ್ಲಿ ರಿಟೈರ್ ಆಗುತ್ತವೆ. ರೈಲಿನ ಬೋಗಿಗಳ ಜೀವಿತಾವಧಿ 25 ವರ್ಷ. ಅದನ್ನು 5 ರಿಂದ 10 ವರ್ಷಗಳವರೆಗೆ ದುರಸ್ತಿ ಮಾಡುವ ಮೂಲಕ ವಿಸ್ತರಿಸಬಹುದು. ರೈಲಿನ ಬೋಗಿಗೆ ವರ್ಷಗಳಾಗುತ್ತಿದ್ದಂತೆ ಐಸಿಎಫ್ ಕೋಚ್ ಅನ್ನು ಪ್ಯಾಸೆಂಜರ್ ರೈಲಿನ ಸೇವೆಯಿಂದ ತೆಗೆದುಹಾಕಲಾಗುತ್ತದೆ. ನಂತರ ಇದನ್ನು NMG ರೇಕ್ ಎಂಬ ಹೆಸರಿನಿಂದ ಆಟೋ ಕ್ಯಾರಿಯರ್ ಆಗಿ ಬಳಸಲಾಗುತ್ತದೆ. NMG ಎಂದರೆ ಹೊಸದಾಗಿ ಮಾರ್ಪಡಿಸಿದ ಗೂಡ್ಸ್ ವ್ಯಾಗನ್.
NMG ವ್ಯಾಗನ್‌ನ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಅದನ್ನು ಸೀಲ್ ಮಾಡಿದ ನಂತರ ಕಾರುಗಳು, ಮಿನಿ ಟ್ರಕ್‌ಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಸುಲಭವಾಗಿ ಲೋಡ್ ಮತ್ತು ಅನ್‌ಲೋಡ್ ಮಾಡುವ ರೀತಿಯಲ್ಲಿ ಈ ವ್ಯಾಗನ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಸಾಮಾನ್ಯ ಕೋಚ್ ಅನ್ನು ಎನ್‌ಎಂಜಿ ಕೋಚ್ ಆಗಿ ಪರಿವರ್ತಿಸಲು ಅದರೊಳಗಿನ ಎಲ್ಲಾ ಸೀಟುಗಳು, ಫ್ಯಾನ್‌ಗಳು, ಲೈಟ್‌ಗಳನ್ನು ತೆಗೆದುಹಾಕಲಾಗುತ್ತದೆ. ಅದನ್ನು ಇನ್ನಷ್ಟು ಬಲಪಡಿಸಲು ಕಬ್ಬಿಣದ ಪಟ್ಟಿಗಳನ್ನು ಹಾಕಲಾಗುತ್ತದೆ. ಬೋಗಿಯ ಹಿಂಭಾಗದಲ್ಲಿ ಬಾಗಿಲು ಅಳವಡಿಸಿ ಅದನ್ನು ತೆರೆಯುವ ಮೂಲಕ ಲಗೇಜ್‌ಗಳನ್ನು ಇರಿಸಲಾಗುತ್ತದೆ.