ಬ್ಲ್ಯಾಕ್ ಹೆಡ್ಸ್ ಸಮಸ್ಯೆಗಳು ಮೂಗಿನ ಮೇಲೆ ಮೊದಲು ಕಾಣಿಸಿಕೊಂಡು ಕ್ರಮೇಣ ಅಲ್ಲೇ ಕೆಳಗಿಳಿದು ಕೆನ್ನೆಯ ಪಕ್ಕಕ್ಕೂ ಹಬ್ಬಿಕೊಳ್ಳುತ್ತವೆ. ಇದರ ನಿವಾರಣೆಗೂ ಕೆಲವು ಟಿಪ್ಸ್ ಗಳಿವೆ.
ಕಪ್ಪು ಚುಕ್ಕೆಯಂತಿರುವ ಇವುಗಳಿಗೆ ಉದ್ದನೆಯ ಬಾಲವೂ ಇದ್ದು, ಅವು ತ್ವಚೆಯೊಳಗೆ ಅಡಗಿರುತ್ತವೆ. ಯಾವುದೇ ಕಾರಣಕ್ಕೂ ನೀವು ಬ್ಲ್ಯಾಕ್ ಹೆಡ್ಸ್ ಗಳನ್ನು ಚಿವುಟಿ ತೆಗೆಯದಿರಿ. ಇದರಿಂದ ಹೊರಭಾಗ ಹೋಗುತ್ತದೆಯೇ ಹೊರತು, ಒಳಭಾಗ ಅಲ್ಲೇ ಕುಳಿತು ರಂಧ್ರವನ್ನು ಮತ್ತಷ್ಟು ದೊಡ್ಡದಾಗಿಸುತ್ತದೆ.
ಸತ್ತ ಜೀವಕೋಶಗಳು, ಕೊಳೆ ಧೂಳು. ತ್ವಚೆಯ ರಂಧ್ರದೊಳಗೆ ಕೂತು ಬ್ಲಾಕ್ ಹೆಡ್ ಗಳ ಉತ್ಪಾದನೆಗೆ ಕಾರಣವಾಗುತ್ತದೆ. ಮೊಟ್ಟೆಯ ಬಿಳಿಭಾಗದ ಲೇಪನವನ್ನು ಮಾಡಿಕೊಳ್ಳುವುದರಿಂದ ಸೂಕ್ಷ್ಮ ರಂಧ್ರಗಳು ಮುಚ್ಚುತ್ತವೆ.
ಇದನ್ನು ಹೀಗೆ ತಯಾರಿಸಿ. ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ವಿಸ್ಕ್ ಮಾಡಿ ನೊರೆಯಾಗಿಸಿ. ನಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ. ಮುಖವನ್ನು ಸ್ವಚ್ಛವಾಗಿ ತೊಳೆದು ನೀರು ಒಣಗಲು ಬಿಡಿ. ಬಳಿಕ ತೆಳುವಾದ ಹತ್ತಿಯಿಂದ ಮೊಟ್ಟೆಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.
ಇದು ಒಣಗಿದಾಕ್ಷಣ ಮತ್ತೆ ಹಚ್ಚಿ. ತುಸು ವಾಸನೆ ಬಂದರೂ ಸಹಿಸಿಕೊಳ್ಳಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಯಾವುದೇ ಸೋಪು ಬಳಸದಿರಿ. ವಾಸನೆ ಹೋಗುವ ತನಕ ನೀರಿನಲ್ಲೇ ಮುಖ ತೊಳೆಯಿರಿ.