ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ‘ತಂಬುಳಿ’

ಸಮ್ಮರ್ ಸೀಸನ್ ನಲ್ಲಿ ನೀರಿನ ದಾಹ ನಿವಾರಣೆಗೆ ತಂಬುಳಿಗಿಂತ ಉತ್ತಮ ವ್ಯಂಜನ ಮತ್ತೊಂದಿಲ್ಲ. ತಂಬುಳಿಯಲ್ಲಿ ಹಲವು ಬಗೆ. ಆದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ತಂಬುಳಿ ಸವಿಯಲೇ ಬೇಕು. ಈ ತಂಬುಳಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಬಸಳೆ ಸೊಪ್ಪು 10 ಎಲೆ
ಕಾಳು ಮೆಣಸು 10
ಜೀರಿಗೆ 1 ಟೀ ಚಮಚ
ಮಜ್ಜಿಗೆ ಅರ್ಧ ಲೀಟರ್
ತುಪ್ಪ 1 ಟೀ ಚಮಚ
ತೆಂಗಿನಕಾಯಿ ತುರಿ 2 ಟೀ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಸಾಸಿವೆ, ಒಣ ಮೆಣಸಿನ ಕಾಯಿ, ತುಪ್ಪ.

ಮಾಡುವ ವಿಧಾನ

ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆ ಮತ್ತು ಕಾಳುಮೆಣಸನ್ನು ಹಾಕಿ ಹುರಿಯಿರಿ. ನಂತರ ಅದಕ್ಕೆ ಬಸಳೆ ಸೊಪ್ಪು ಹಾಕಿ ಬಾಡಿಸಿ. ಈ ಮಿಶ್ರಣ ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ. ಉಪ್ಪು, ಸ್ವಲ್ಪ ಮಜ್ಜಿಗೆ ಅಥವಾ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಉಳಿದ ಮಜ್ಜಿಗೆ ಬೆರೆಸಿ ಒಗ್ಗರಣೆಯನ್ನು ಹಾಕಿ ಬಸಳೆ ಸೊಪ್ಪಿನ ತಂಬುಳಿ ಟೇಸ್ಟ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read