
ನಮ್ಮ ದೇಹಕ್ಕೆ ಇತರ ಎಲ್ಲಾ ಪೋಷಕಾಂಶಗಳಂತೆ ಕಾರ್ಬೋಹೈಡ್ರೇಟ್‌ಗಳ ಸೇವನೆಯೂ ಅವಶ್ಯಕವಾಗಿದೆ. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ತಿನ್ನಬೇಕು. ಇಲ್ಲದಿದ್ದರೆ ದೇಹಕ್ಕೆ ಪ್ರಯೋಜನಗಳಿಗಿಂತ ಹೆಚ್ಚು ಹಾನಿಯಾಗುತ್ತದೆ. ಸಾಮಾನ್ಯವಾಗಿ ಆರೋಗ್ಯ ತಜ್ಞರು ಬೆಳಗಿನ ಉಪಾಹಾರದಲ್ಲಿ ಕಾರ್ಬೋಹೈಡ್ರೇಟ್ ಆಧಾರಿತ ಆಹಾರಗಳನ್ನು ತಿನ್ನಬಾರದೆಂದು ಹೇಳುತ್ತಾರೆ.
ಏಕೆಂದರೆ ಹಾಗೆ ಮಾಡುವುದರಿಂದ ಕಾರ್ಟಿಸೋಲ್ ಮತ್ತು ಡೋಪಮೈನ್‌ನಂತಹ ರಾಸಾಯನಿಕಗಳು ಬಿಡುಗಡೆಯಾಗಬಹುದು. ಇದು ನಿಮ್ಮಲ್ಲಿ ಆಲಸ್ಯವನ್ನುಂಟು ಮಾಡುತ್ತದೆ. ಬೆಳಗಿನ ಉಪಾಹಾರವನ್ನು ಎಷ್ಟು ಆರೋಗ್ಯಕರವಾಗಿರುತ್ತದೆಯೋ ಅಷ್ಟು ಒಳ್ಳೆಯದು. ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಅದು ಸಹಾಯ ಮಾಡುತ್ತದೆ.
ಬೆಳಗಿನ ಉಪಾಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ದೂರವಿಡಿ…
ಬಿಡುವಿಲ್ಲದ ಕೆಲಸ ಮತ್ತು ಒತ್ತಡದಿಂದಾಗಿ ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ವಿಟಮಿನ್, ಪ್ರೋಟೀನ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಆಹಾರವನ್ನೇ ಬೆಳಗಿನ ಉಪಹಾರಕ್ಕೆ ಸೇವಿಸಬೇಕು. ಹಣ್ಣುಗಳು ಮತ್ತು ಸೀಡ್ಸ್ ಅನ್ನು ಸೇವನೆ ಮಾಡಬಹುದು. ದೇಹವು ಸರಿಯಾದ ಪೋಷಣೆಯನ್ನು ಪಡೆಯಲು ನಮಗೆ ಕಾರ್ಬೋಹೈಡ್ರೇಟ್‌ಗಳು ಬೇಕಾಗುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಾವು ಅವುಗಳನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸುವುದನ್ನು ತಪ್ಪಿಸಬೇಕು.
ತೂಕ ಹೆಚ್ಚಾಗುತ್ತದೆ: ಬೆಳಗಿನ ಉಪಾಹಾರದಲ್ಲಿ ಕಾರ್ಬೋಹೈಡ್ರೇಟ್ ಸೇವನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ನೀವು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಇದನ್ನು ಪರಿಗಣಿಸಿ.
ಹಸಿವನ್ನು ಹೆಚ್ಚಿಸುತ್ತದೆ: ಬೆಳಗ್ಗೆ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದರೆ, ಗ್ರೆಲಿನ್ ಪ್ರತಿಕ್ರಿಯೆಯು ಹೆಚ್ಚಾಗಬಹುದು. ಇದು ಹಸಿವಿನ ಹಾರ್ಮೋನ್ ಆಗಿದ್ದು, ಆಹಾರವನ್ನು ತಿನ್ನಲು ಮೆದುಳಿಗೆ ಸಂಕೇತವನ್ನು ನೀಡುತ್ತದೆ. ಬೆಳಗ್ಗೆ ಕಾರ್ಬ್ಸ್ ತಿನ್ನುವುದರಿಂದ ಬೇಗನೆ ಹಸಿವಾಗುತ್ತದೆ ಮತ್ತು ಅತಿಯಾಗಿ ತಿನ್ನುವುದರಿಂದ ತೂಕವೂ ಹೆಚ್ಚಾಗಬಹುದು.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ಕಾರ್ಬೋಹೈಡ್ರೇಟ್ ಇರುವ ಉಪಹಾರವನ್ನು ತಿನ್ನುವುದು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇದು ಲೆಪ್ಟಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನೀವು ಅನೇಕ ಕೆಲಸಗಳಲ್ಲಿ ತೃಪ್ತಿಯನ್ನು ಅನುಭವಿಸುವುದಿಲ್ಲ. ಜೊತೆಗೆ ನಿಮ್ಮ ಎಲ್ಲಾ ಇಂದ್ರಿಯಗಳ ಮೇಲೂ ಇದು ಪರಿಣಾಮ ಬೀರಲು ಪ್ರಾರಂಭಿಸುತ್ತವೆ.