ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕಿರುಸಾಲ ನೀಡುವ ಪಿಎಂ ಸ್ವಾನಿಧಿ ಕಡೆ ಈ ವರ್ಷ ಹೆಚ್ಚಿನ ಗಮನ ಹರಿಸಲು ತೀರ್ಮಾನಿಸಲಾಗಿದೆ.
ಈ ಯೋಜನೆ ಅಡಿ ಬೀದಿಬದಿ ವ್ಯಾಪಾರಿಗಳಿಗೆ ಮೂರು ಸಾವಿರದಿಂದ ನಾಲ್ಕು ಸಾವಿರ ರೂಪಾಯಿಗಳವರೆಗಿನ ಮೊತ್ತದ ಕಿರು ಸಾಲ ನೀಡಲಾಗುತ್ತಿದ್ದು, ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಆಧಾರ ಪಡೆಯದೆ ಇದನ್ನು ನೀಡಲಾಗುತ್ತದೆ.
ನವದೆಹಲಿಯಲ್ಲಿ ನಡೆದ ಡಿಜಿಟಲ್ ಇಂಡಿಯಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಡಿಜಿಟಲ್ ತಂತ್ರಜ್ಞಾನದ ನೆರವಿನ ಮೂಲಕ ಪಿಎಂ ಸ್ವಾನಿಧಿ ಯೋಜನೆ ಅಡಿ ಕಿರು ಸಾಲ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.