ಮೆಂತ್ಯ ಸೊಪ್ಪು ಬಹಳ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಜನರು ಮೆಂತ್ಯ ಕಹಿ ಎನ್ನುವ ಕಾರಣಕ್ಕೆ ತಿನ್ನೋದಿಲ್ಲ. ಅಂತವರು ಮೆಂತ್ಯ ಸೊಪ್ಪಿನ ಪಲಾವ್ ಮಾಡಿ ತಿಂದರೆ ಬಾಯಿಗೂ ರುಚಿ, ದೇಹಕ್ಕೂ ಒಳ್ಳೆಯದು.
ಮೆಂತ್ಯ ಸೊಪ್ಪಿನ ಪಲಾವ್ ಮಾಡಲು ಬೇಕಾಗುವ ಪದಾರ್ಥ :
200 ಗ್ರಾಂ. ಅಕ್ಕಿ
200 ಗ್ರಾಂ. ಕತ್ತರಿಸಿದ ಮೆಂತ್ಯ ಸೊಪ್ಪು
2 ಚಮಚ ತುಪ್ಪ
½ ಚಮಚ ಜೀರಿಗೆ
5-6 ಕಾಳು ಮೆಣಸಿನ ಪುಡಿ
3 ಏಲಕ್ಕಿ
ಸ್ವಲ್ಪ ದಾಲ್ಚಿನಿ
1 ಹಸಿ ಮೆಣಸಿನ ಕಾಯಿ
1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್
1/3 ಕಪ್ ಅವರೆಕಾಳು
1 ಕೆಂಪು ಮೆಣಸು
ರುಚಿಗೆ ತಕ್ಕಷ್ಟು ಉಪ್ಪು
ಮೆಂತ್ಯ ಸೊಪ್ಪಿನ ಪಲಾವ್ ಮಾಡುವ ವಿಧಾನ :
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನೆಯಲು ಬಿಡಿ.
ಇನ್ನೊಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತ್ರ ಜೀರಿಗೆ ಹಾಕಿ. ನಂತ್ರ ಮೆಣಸಿನ ಪುಡಿ, ಏಲಕ್ಕಿ, ದಾಲ್ಚಿನಿ ಹಾಕಿ.
ನಂತ್ರ ಹಸಿ ಮೆಣಸಿನ ಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅವರೆಕಾಳು, ಕೆಂಪು ಮೆಣಸನ್ನು ಹಾಕಿ.
ಮಸಾಲೆ ಫ್ರೈ ಆಗ್ತಾ ಇದ್ದಂತೆ ಮೆಂತ್ಯ ಸೊಪ್ಪನ್ನು ಹಾಕಿ ಫ್ರೈ ಮಾಡಿ.
ನಂತ್ರ ಅಕ್ಕಿಯನ್ನು ಹಾಕಿ, ಉಪ್ಪು ಹಾಗೂ ನೀರನ್ನು ಹಾಕಿ 15 ನಿಮಿಷಗಳ ಕಾಲ ಬೇಯಿಸಿ. ಬಿಸಿ ಬಿಸಿ ಮೆಂತ್ಯೆ ಪಲಾವನ್ನು ಸೇವಿಸಿ.