ಕರಿದ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಿಂದ ದೂರವಾದಷ್ಟೂ ಅದು ನಮ್ಮನ್ನು ಬಳಿ ಕರೆಯುತ್ತದೆ. ಅದರಲ್ಲೂ ಹೋಟೇಲ್ ಬೀದಿ ಬದಿಗಳಲ್ಲಿ ಸಿಗುವಂತಹ ಆಹಾರವನ್ನು ಸೇವಿಸಲೇಬಾರದು.
ಇಂಥ ಸಣ್ಣ ಅಂಗಡಿಗಳಲ್ಲಿ ಹೈಡ್ರೋಜನೀಕರಣದ ಎಣ್ಣೆಯನ್ನು ಬಳಸುತ್ತಾರೆ. ಇದರಲ್ಲಿ ಟ್ರಾನ್ಸ್ ಫ್ಯಾಟ್ ಅಧಿಕವಾಗಿದ್ದು ಆಹಾರಕ್ಕೆ ರುಚಿ ಕೊಡುತ್ತದೆ ಆದರೆ ಆರೋಗ್ಯ ಕೆಡುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿ ಹೆಚ್ಚು ತಿನ್ನುವುದರಿಂದ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯದ ಸಂಬಂಧಿತ ಕಾಯಿಲೆಗಳು ಬರುತ್ತವೆ. ಮನೆಯಲ್ಲಿ ಆರೋಗ್ಯಕರ ಎಣ್ಣೆಯಿಂದ ತಯಾರಿಸಿದ ತಿನಿಸಾದರೂ ಹಿತಮಿತವಾಗಿ ಸೇವಿಸಿ.
ಅಧಿಕ ಉಷ್ಣತೆಯಲ್ಲಿ ಫ್ರೈ ಮಾಡುವ ಕಾರಣದಿಂದ ಅಕ್ರಿಡಮೈಲ್ ಎನ್ನುವ ರಾಸಾಯನಿಕ ಉತ್ಪಾದನೆ ಆಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ. ಸ್ಯಾಚುರೇಟೆಡ್ ಮತ್ತು ಮೊನೊಸ್ಯಾಚುರೇಟೆಡ್ ಎಣ್ಣೆಯನ್ನು ಬಳಸಿದರೆ ಇದು ಅಧಿಕ ಉಷ್ಣತೆ ಯಲ್ಲೂ ಸ್ಥಿರವಾಗಿರುತ್ತದೆ. ಆಳವಾಗಿ ಕರಿಯಬೇಕಾದರೆ ತೆಂಗಿನೆಣ್ಣೆ ಉಪಯೋಗಿಸಿ.