ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಪ್ರವಾಸಿ ತಾಣಗಳು ಕೂಡ ಹೆಚ್ಚಾಗಿವೆ. ಬೆಳ್ತಂಗಡಿ ತಾಲ್ಲೂಕಿನ ವೇಣೂರು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 38 ಅಡಿ ಎತ್ತರದ ಬಾಹುಬಲಿ ಗೊಮ್ಮಟನ ವಿಗ್ರಹ ಇಲ್ಲಿದೆ.
ಬಸದಿಗಳು, ಮಹಾದೇವ ದೇವಾಲಯ ಸೇರಿದಂತೆ ಅನೇಕ ನೋಡಬಹುದಾದ ತಾಣಗಳಿವೆ. ಕ್ರಿ.ಶ. 1604 ರಲ್ಲಿ 4 ನೇ ತಿಮ್ಮಣ್ಣ ಅಜಿಲ ಬಾಹುಬಲಿ ವಿಗ್ರಹವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಬೇರೆಯವರು ಈ ವಿಗ್ರಹವನ್ನು ತೆಗೆದುಕೊಂಡು ಹೋಗಬಾರದೆಂದು ನದಿಯ ದಡದಲ್ಲಿ ಹೂಳಲಾಗಿತ್ತು.
ಯುದ್ಧದಲ್ಲಿ ಜಯಿಸಿದ ನಂತರ ಗೊಮ್ಮಟನ ಮೂರ್ತಿಯನ್ನು ಹೊರತೆಗೆದು ಪುನಃ ಪ್ರತಿಷ್ಠಾಪನೆ ಮಾಡಲಾಯಿತು ಎಂದು ಹೇಳಲಾಗುತ್ತದೆ. ವೇಣೂರು ಬಾಹುಬಲಿಯನ್ನು ನೋಡಲು ದೇಶ, ವಿದೇಶಗಳಿಂದಲೂ ಯಾತ್ರಿಕರು, ಪ್ರವಾಸಿಗರು ಬರುತ್ತಾರೆ.
ವೇಣೂರು ಸುತ್ತಮುತ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಅವುಗಳನ್ನು ಒಮ್ಮೆ ನೋಡಿಕೊಂಡು ಬನ್ನಿ.