ಹಳೆ ಸಂಪ್ರದಾಯದಲ್ಲಿ ಎಲ್ಲ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಕೆಲ ಪದ್ಧತಿಗಳನ್ನು ಪ್ರತಿ ದಿನ ತಪ್ಪದೆ ಅನುಸರಿಸುತ್ತ ಬಂದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುವ ಜೊತೆಗೆ ಕೆಟ್ಟ ದೃಷ್ಟಿ, ಮನೆ ಹಾಗೂ ಮನೆಯವರ ಮೇಲೆ ಬೀಳೋದಿಲ್ಲ.
ಗ್ರಂಥಗಳಲ್ಲಿ ದಕ್ಷಿಣ ಮುಖದ ಶಂಖಕ್ಕೆ ಹೆಚ್ಚು ಮಹತ್ವವಿದೆ. ವಿಧಿ-ವಿಧಾನದ ಮೂಲಕ ಇದ್ರ ಪೂಜೆ ಮಾಡಿದ್ರೆ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ.
ಮನೆಯಲ್ಲಿ ದಕ್ಷಿಣ ಮುಖದ ಶಂಖವಿಟ್ರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯ ಮಹಿಳೆ ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ದಕ್ಷಿಣ ಮುಖದ ಶಂಖದಿಂದ ಮನೆಯನ್ನು ಶುದ್ಧಗೊಳಿಸಬೇಕು.
ಮೊದಲು ಕೆಂಪು ಬಣ್ಣದ ಬಟ್ಟೆಯಲ್ಲಿ ದಕ್ಷಿಣ ಮುಖದ ಶಂಖವನ್ನು ಇಡಬೇಕು. ಅದಕ್ಕೆ ಗಂಗಾ ಜಲವನ್ನು ಹಾಕಬೇಕು. ಧೂಪ-ದೀಪ ಹಚ್ಚಿ ಶಂಖವನ್ನು ಪೂಜೆ ಮಾಡಿ.
ಶಂಖದ ಮುಂದೆ ಕುಳಿತು ಮಂತ್ರ ಜಪಿಸಿದ ನಂತ್ರ ಮನೆ, ಮಕ್ಕಳು, ಪತಿ ಮೇಲೆ ಪ್ರೋಕ್ಷಣೆ ಮಾಡಿ. ಈ ಉಪಾಯವನ್ನು ಪ್ರತಿ ದಿನ ಮಾಡುವುದ್ರಿಂದ ನಕಾರಾತ್ಮಕ ಶಕ್ತಿ ದೂರವಾಗಿ ದೃಷ್ಟಿ ಬೀಳುವುದಿಲ್ಲ.