ಅನೇಕ ಮನೆಗಳಲ್ಲಿ ಬೆಳಗಿನ ಉಪಹಾರಕ್ಕೆ ಬ್ರೆಡ್ ಸೇವಿಸುತ್ತಾರೆ. ಕಚೇರಿಗೆ ಲಂಚ್ ಬಾಕ್ಸ್, ಮಕ್ಕಳ ಶಾಲೆಗೆ ಟಿಫಿನ್ ಇವಕ್ಕೆಲ್ಲ ಬ್ರೆಡ್‌ನಿಂತ ಮಾಡಿದ ತಿನಿಸುಗಳನ್ನು ಕಳಿಸುತ್ತಾರೆ. ಬ್ರೆಡ್ ಲಘು ಉಪಹಾರ ಎಂಬುದು ಅನೇಕರ ನಂಬಿಕೆ. ಅದು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ ಎಂದುಕೊಂಡಿರುತ್ತಾರೆ. ಬ್ರೆಡ್ ದಿನದಿಂದ ದಿನಕ್ಕೆ ನಮ್ಮ ಆಧುನಿಕ ಜೀವನಶೈಲಿಯ ಪ್ರಮುಖ ಭಾಗವಾಗುತ್ತಿದೆ. ಈಗ ಬಹುತೇಕ ಎಲ್ಲಾ ಕಿರಾಣಿ ಅಂಗಡಿಗಳಲ್ಲೂ ಬ್ರೆಡ್ ಲಭ್ಯವಿರುತ್ತದೆ. ಬ್ರೆಡ್ ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ, ಅದು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ ಎಂಬುದು ಜನರ ನಂಬಿಕೆ. ಆದರೆ ಇದು ನಿಜವೇ? ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಅನ್ನೋದನ್ನು ತಿಳಿದುಕೊಳ್ಳೋಣ.
ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನಬೇಡಿ!
ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬ್ರೆಡ್ ತಿನ್ನಲೇಬಾರದು ಎಂದು ಇದರ ಅರ್ಥವಲ್ಲ, ಉಪಹಾರದ ಜೊತೆಗೆ ಒಂದು ತುಂಡು ಬ್ರೆಡ್ ಅನ್ನು ಕೂಡ ಸೇವನೆ ಮಾಡಬಹುದು. ಆದರೆ ಬಿಳಿ ಬ್ರೆಡ್ ಬದಲಿಗೆ ಮಲ್ಟಿಗ್ರೇನ್ ಬ್ರೆಡ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬ್ರೆಡ್‌ನಲ್ಲಿ ಪೋಷಕಾಂಶಗಳೇ ಇಲ್ಲವೆಂದೇನಲ್ಲ.
ಕ್ಯಾಲೋರಿಗಳು: 82
ಪ್ರೋಟೀನ್: 4 ಗ್ರಾಂ
ಒಟ್ಟು ಕೊಬ್ಬು: 1 ಗ್ರಾಂ
ಕೊಬ್ಬು: 0 ಗ್ರಾಂ
ಕಾರ್ಬೋಹೈಡ್ರೇಟ್ಗಳು: 14 ಗ್ರಾಂ
ಫೈಬರ್: 2 ಗ್ರಾಂ
ಸಕ್ಕರೆ: 1 ಗ್ರಾಂ
ಖಾಲಿ ಹೊಟ್ಟೆಯಲ್ಲಿ ಬ್ರೆಡ್ ಸೇವನೆಯ ಅನಾನುಕೂಲಗಳು…
ರಕ್ತದ ಸಕ್ಕರೆ ಮಟ್ಟ ಹೆಚ್ಚಳ – ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಇದರ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಬ್ರೆಡ್ ಅಮಿಲೋಪೆಕ್ಟಿನ್ ಎ ಅನ್ನು ಹೊಂದಿರುತ್ತದೆ, ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ದಿನನಿತ್ಯದ ಬ್ರೆಡ್ ಸೇವನೆಯಿಂದ ಮಧುಮೇಹ, ಮೂತ್ರಪಿಂಡದ ಕಲ್ಲುಗಳು ಮತ್ತು ಹೃದ್ರೋಗಗಳು ಕೂಡ ಬರಬಹುದು.
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ- ವಿಟಮಿನ್ ಇ ಮತ್ತು ಫೈಬರ್ ಬ್ರೆಡ್‌ನಲ್ಲಿ ಅಷ್ಟೇನೂ ಇರುವುದಿಲ್ಲ. ಈ ಕಾರಣದಿಂದಾಗಿ ಇದನ್ನು ಪ್ರತಿದಿನ ಸೇವಿಸಿದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.
ತೂಕ ಹೆಚ್ಚಳ – ಪ್ರತಿದಿನ ಬ್ರೆಡ್ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಮೊದಲು ಮಲಬದ್ಧತೆ ಪ್ರಾರಂಭವಾಗುತ್ತದೆ, ನಂತರ ಚಯಾಪಚಯ ದರವು ಕಡಿಮೆಯಾಗುತ್ತದೆ. ಬಳಿಕ ಪ್ರೋಟೀನ್ ಮತ್ತು ಕೊಬ್ಬು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕಾರ್ಬೋಹೈಡ್ರೇಟ್‌ಗಳು ಸಕ್ಕರೆಯಾಗಿ ಬದಲಾಗಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ ತೂಕ ಹೆಚ್ಚಾಗುತ್ತದೆ.