‘ಪ್ರಜಾ ಧ್ವನಿ’ ಯಾತ್ರೆ ವೇಳೆ ಕಲಾವಿದರತ್ತ ನೋಟು ಎಸೆದ ಡಿ.ಕೆ. ಶಿವಕುಮಾರ್….!

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿರುವ ಕಾಂಗ್ರೆಸ್, ಎರಡನೇ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.

ಇದರ ಮಧ್ಯೆ ಮಂಡ್ಯ ಜಿಲ್ಲೆಯಲ್ಲಿ ‘ಪ್ರಜಾಧ್ವನಿ’ ಯಾತ್ರೆ ನಡೆಸುತ್ತಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಲಾವಿದರತ್ತ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಎಸೆದ ಘಟನೆ ನಡೆದಿದ್ದು, ಇದು ಈಗ ವಾದ – ವಿವಾದಕ್ಕೆ ಕಾರಣವಾಗಿದೆ. ಬೇವಿನಹಳ್ಳಿ ಗ್ರಾಮದಲ್ಲಿ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಅವರು ನೋಟು ಎಸೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡಿ.ಕೆ. ಶಿವಕುಮಾರ್ ಇತರ ನಾಯಕರ ಜೊತೆ ಬಸ್ ನ ರೂಫ್ ಟಾಪ್ ಮೂಲಕ ರೋಡ್ ಶೋ ನಡೆಸುವಾಗ ಪಕ್ಕದಲ್ಲಿಯೇ ಬರುತ್ತಿದ್ದ ಕಲಾವಿದರು ಹಣಕ್ಕಾಗಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವಕುಮಾರ್ ತಮ್ಮ ಜೇಬಿನಿಂದ ನೋಟು ತೆಗೆದು ಬಸ್ ಮೇಲಿದ್ದ ಕಾರಣ ಕೈಗೆ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲಾವಿದರತ್ತ ಎಸೆದಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿ ಪಕ್ಷಗಳು, ನೋಟು ಎಸೆಯುವ ಮೂಲಕ ಡಿ.ಕೆ. ಶಿವಕುಮಾರ್ ದರ್ಪ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರೆ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ಸಿಗರು, ಡಿ.ಕೆ. ಶಿವಕುಮಾರ್ ಬಸ್ ಮೇಲಿದ್ದರು. ಆ ಸಂದರ್ಭದಲ್ಲಿ ಕಲಾವಿದರು ಹಣಕ್ಕೆ ಮನವಿ ಮಾಡಿದ್ದಾರೆ. ಬಸ್ ಮೇಲಿದ್ದ ಕಾರಣ ಕೈಗೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದು, ಹೀಗಾಗಿ ನೋಟುಗಳನ್ನು ಮೇಲಿನಿಂದ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read