ಚಿಕ್ಕವರಿದ್ದಾಗ ಹೆಚ್ಚಾಗಿ ತಿಂದ ಹಣ್ಣುಗಳಲ್ಲಿ ಒಂದು ಸೀಬೆ. ಇದನ್ನು ಚೇಪೆಕಾಯಿ, ಪೇರಳೆ ಕಾಯಿ ಅಂತ ಕೂಡ ಕರೆಯಲಾಗುತ್ತೆ. ವಿಟಮಿನ್ ಸಿ ಭರಿತ ಸೀಬೆಯು ಪೋಷಕಾಂಶಗಳ ಗಣಿಯಾಗಿದೆ. ಸೀಬೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ.
* ಪೇರಳೆಯಲ್ಲಿರುವ ಸಿ ವಿಟಮಿನ್ ನಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಳೆಗಾಲದಲ್ಲಿ ಬರುವ ಶೀತ, ನೆಗಡಿ, ಕೆಮ್ಮುಗಳನ್ನು ದೂರಮಾಡುತ್ತದೆ. ಸಿ ವಿಟಮಿನ್ ಗೆ ಕ್ಯಾನ್ಸರ್ ಕಾರಕಗಳನ್ನು ದೂರ ಮಾಡುವ ಶಕ್ತಿಯೂ ಇದೆ.
* ಸೀಬೆ ಹಣ್ಣಿನ ಬೀಜದ ಸತ್ವವು ಥೈರಾಯಿಡ್ ಗ್ರಂಥಿಗೆ ಆರೋಗ್ಯಕಾರಿ.
* ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಸೀಬೆಕಾಯಿಗೆ ಇದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣವೂ ಜೀರ್ಣಾಶಯವನ್ನು ಆರೋಗ್ಯದಿಂದಿಡುತ್ತದೆ.
* ಪೇರಳೆಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟಾಶಿಯಂ, ಸೋಡಿಯಂ ಸಮತೋಲನದಲ್ಲಿ ಇರುತ್ತದೆ. ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ತಗ್ಗುತ್ತದೆ.
* ಸೀಬೆಯಲ್ಲಿನ ಆಂಟಿ ಆಕ್ಸಿಡೆಂಟ್ ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಒಂದು ಸೀಬೆ ತಿಂದರೆ ಚರ್ಮವೂ ಆರೋಗ್ಯವಾಗಿರುತ್ತದೆ. ಸುಕ್ಕು ಬೀಳುವುದು ಇಲ್ಲವಾಗುತ್ತದೆ.
* ವಿಟಮಿನ್ ಎ ಕೂಡ ಇದರಲ್ಲಿ ಹೆಚ್ಚಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
* ಬಾಯಿಯಲ್ಲಿನ ಅಲ್ಸರ್, ಹುಣ್ಣುಗಳಂತಹ ಅನಾರೋಗ್ಯಗಳನ್ನು ದೂರ ಇಡುವಲ್ಲಿ ಸೀಬೆ ಸಹಕಾರಿ. ಹಲ್ಲುಗಳ ನಡುವೆ ಕಾಡುವ ಇನ್ಫೆಕ್ಷನ್ ಅನ್ನು ಪರಿಹರಿಸುತ್ತದೆ.
* ಸೀಬೆಯಲ್ಲಿ ನಾರು ಸತ್ವ ಹೆಚ್ಚು. ಹಿಟ್ಟು ಸತ್ವ ತುಂಬಾ ಕಡಿಮೆ. ಹೀಗಾಗಿ ಒಂದು ಹಣ್ಣು ತಿಂದರೆ ಹೊಟ್ಟೆ ತುಂಬಿದಂತೆ ಇರುತ್ತದೆ.
* ಅಜೀರ್ಣವಿದ್ದಾಗ, ವಾಂತಿ ಇರುವಾಗ ನಾಲ್ಕು ಸೀಬೆ ಮರದ ಎಲೆಗಳನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಕುದಿಸಿ ಬಿಸಿಬಿಸಿಯಾಗಿ ಕುಡಿದರೆ ಫಲವಿದೆ.
* ಸೀಬೆ ಮರದ ಎಲೆಗಳಿಂದ ತಯಾರಿಸುವ ಟೀ ಕುಡಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಂದೇ ಹದದಲ್ಲಿ ಇರುತ್ತದೆ.