alex Certify ‘ಪಪ್ಪಾಯ’ ಹಣ್ಣಿನ ಬೀಜದಿಂದಲೂ ಇದೆ ಇಷ್ಟೆಲ್ಲಾ ಉಪಯೋಗಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಪ್ಪಾಯ’ ಹಣ್ಣಿನ ಬೀಜದಿಂದಲೂ ಇದೆ ಇಷ್ಟೆಲ್ಲಾ ಉಪಯೋಗಗಳು

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಗೊತ್ತಿರುವ ಸಂಗತಿ. ಆದರೆ ಅದರ ಬೀಜದಿಂದ ಆಗುವ ಲಾಭಗಳು ಏನು ಎಂದು ತಿಳಿಯೋಣ.

ಎರಡು ಚಿಕ್ಕ ಚಮಚದಷ್ಟು ಪಪ್ಪಾಯ ಹಣ್ಣಿನ ಬೀಜಗಳನ್ನು ಒಂದು ಚಿಕ್ಕ ಚಮಚ ಜೇನುತುಪ್ಪದೊಂದಿಗೆ ಬೆರಿಸಿ 30 ದಿನದವರೆಗೆ ಬೆಳೆಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಮೂಲಕ ಅದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದು.

1) ಹೊಟ್ಟೆಯಲ್ಲಿನ ಹುಳಗಳನ್ನು ಕೊಲ್ಲುತ್ತದೆ. ಹೊಟ್ಟೆಯಲ್ಲಿ ಗುಡುಗುಡು, ಅಜೀರ್ಣ ಮೊದಲಾದ ತೊಂದರೆ ಇದ್ದವರಿಗೆ ಈ ಮಿಶ್ರಣದ ಸೇವನೆಯಿಂದ ನೋವು ನಿವಾರಣೆಯಾಗುತ್ತದೆ.

2) ದೇಹದ ಕಲ್ಮಶಗಳನ್ನು ಹೊರ ಹಾಕುತ್ತದೆ. ಇದರಲ್ಲಿರುವ ಕೆಲ ಆಮ್ಲಗಳು ಪ್ರಮುಖ ಅಂಗಗಳಲ್ಲಿರುವ ಕಲ್ಮಶಗಳನ್ನು ಹೊರ ಹಾಕಿ ಸ್ವಚ್ಚಗೊಳಿಸುತ್ತದೆ.

3) ಸಂಧಿವಾತವನ್ನು ಗುಣ ಪಡಿಸಲು ಮತ್ತು ಮೂಳೆಗಳು ಹೆಚ್ಚಿನ ದೃಢತೆ ಪಡೆಯಲು ನೆರವಾಗುತ್ತದೆ.

4) ವೈರಲ್‌ ಜ್ವರದ ವಿರುದ್ದ ಹೋರಾಡುತ್ತದೆ. ಇದರಲ್ಲಿರುವ ಪ್ರಬಲ ಆಂಟಿ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

5) ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ. ಇದರಲ್ಲಿರುವ ಕೆಲವು ಕಿಣ್ವಗಳು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಮೂಲಕ ಫಲವತ್ತತೆಯನ್ನು ಹೆಚ್ಚಿಸಿ ಸಂತಾನ ಫಲ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

6) ಈ ಮಿಶ್ರಣ ಉತ್ತಮ ಪ್ರಮಾಣದ ಪ್ರೋಟಿನುಗಳನ್ನು ಹೊಂದಿದೆ. ಇದು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

7) ಈ ಮಿಶ್ರಣ ಕೊಬ್ಬನ್ನು ಕರಗಿಸಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...