ಆತುರಾತುರವಾಗಿ ಕೆಲಸ ಮಾಡುವಾಗ ಕೆಲವೊಂದು ವಸ್ತುಗಳು ಕೈ ಜಾರಿ ಕೆಳಗೆ ಬೀಳುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದ್ರೆ ಒಂದೇ ವಸ್ತು ಆಗಾಗ ಕೈ ಜಾರಿ ಕೆಳಗೆ ಬಿದ್ರೆ ಅದನ್ನು ಅಶುಭವೆನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ದ ಪ್ರಕಾರ ಆಗಾಗ ಕೈನಿಂದ ವಸ್ತುಗಳು ಜಾರಿ ಬೀಳ್ತಿದ್ದರೆ ಗ್ರಹದೋಷವಿದೆ ಎಂದರ್ಥ. ವಾಸ್ತು ದೋಷದ ಸಂಕೇತವನ್ನೂ ಇದು ತೋರಿಸುತ್ತದೆ.
ಕೈನಿಂದ ಮಾತ್ರ ವಸ್ತುಗಳು ಬೀಳಬೇಕೆಂದೇನಿಲ್ಲ. ಒಲೆ ಮೇಲಿಟ್ಟ ಹಾಲು ಪದೇ ಪದೇ ಉಕ್ಕುತ್ತಿದ್ದರೂ ಅದು ಅಶುಭ ಸಂಕೇತ. ಮನೆಯಲ್ಲಿ ಸುಖ-ಶಾಂತಿ ಕಡಿಮೆಯಾಗುತ್ತದೆ ಎಂಬುದರ ಸಂಕೇತ. ಕುಟುಂಬದಲ್ಲಿ ಜಗಳಕ್ಕೆ ಇದು ಕಾರಣವಾಗುತ್ತದೆ.
ಕೈ ತಪ್ಪಿ ಉಪ್ಪು ಆಗಾಗಾ ಕೆಳಗೆ ಬೀಳ್ತಿದ್ದರೆ ಶುಕ್ರ ಹಾಗೂ ಚಂದ್ರ ಗ್ರಹಗಳು ದುರ್ಬಲವಾಗಿವೆ ಎಂದರ್ಥ. ವೈವಾಹಿಕ ಜೀವನದಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಕೆಲವರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ.
ಕೈನಿಂದ ಕಾಳು ಮೆಣಸು ಕೆಳಗೆ ಬೀಳುವುದು ಕೂಡ ಅಶುಭ ಸಂಕೇತ. ಹತ್ತಿರದ ಸಂಬಂಧಿ ಜೊತೆ ನಿಮ್ಮ ಸಂಬಂಧ ಹಳಸಲಿದೆ ಎಂದರ್ಥ.
ಗೋಧಿ, ಅಕ್ಕಿ ಸೇರಿದಂತೆ ಯಾವುದೇ ಧಾನ್ಯಗಳು ಆಗಾಗ ಬೀಳ್ತಿದ್ದರೆ ಅದನ್ನು ಅಶುಭವೆನ್ನಲಾಗುತ್ತದೆ. ಧಾನ್ಯಗಳು ಕೆಳಗೆ ಬೀಳುವುದ್ರಿಂದ ಅನ್ನಪೂರ್ಣೆ ಕೋಪಗೊಳ್ಳುತ್ತಾಳೆ. ಧಾನ್ಯಗಳು ಬಿದ್ದ ತಕ್ಷಣ ಅದನ್ನು ಹಣೆಗೆ ಒತ್ತಿ ಕ್ಷಮೆ ಕೇಳಬೇಕೆಂಬ ನಂಬಿಕೆಯಿದೆ.
ಎಣ್ಣೆ ಕೈ ತಪ್ಪಿ ಕೆಳಗೆ ಬಿದ್ದಲ್ಲಿ ಕುಟುಂಬದಲ್ಲಿ ಸಮಸ್ಯೆ ಎದುರಾಗಲಿದೆ ಎಂದರ್ಥ. ಸಾಲದ ಹೊರೆ ನಿಮ್ಮ ಮೇಲೆ ಹೆಚ್ಚಾಗಲಿದೆ.