ಜನರಿಗೆ ವಿಮಾ ಸುರಕ್ಷತೆ ಒದಗಿಸಲೆಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರವು 2015 ರಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್‌ಬಿವೈ) ಜಾರಿಗೆ ತಂದಿದೆ.
ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಬ್ಯಾಂಕ್ ಖಾತೆ ಹೊಂದಿರುವವರು, 18 ರಿಂದ 50 ವರ್ಷದೊಳಗಿನವರು, ಪಿಎಂಜೆಜೆಬಿವೈ ಯೋಜನೆಗೆ ಅರ್ಹರು ಆಟೋ ಆಕ್ಟಿವೇಟ್ ಅಥವಾ ಆಟೋ ಡೆಬಿಟ್ ಆಯ್ಕೆಯನ್ನು ಆರಿಸಬಹುದಾಗಿದೆ.
ಆಧಾರ್ ಸಂಖ್ಯೆಯನ್ನೇ ಪ್ರಾಥಮಿಕ ಕೆವೈಸಿ ದಾಖಲೆಯಾಗಿ ಪರಿಗಣಿಸಲ್ಪಡುವ ಈ ಪ್ರಕ್ರಿಯೆಯಲ್ಲಿ 12 ತಿಂಗಳ ಅವಧಿಗೆ ಎರಡು ಲಕ್ಷ ರೂ.ಗಳ ಜೀವ ವಿಮಾ ಪಾಲಿಸಿ ಒದಗಿಸಲಾಗುವುದು ಹಾಗೂ ಇದು ಜೂನ್ 1ರಿಂದ ಮೇ 31ರವರೆಗೆ ಚಾಲ್ತಿಯಲ್ಲಿರಲಿದೆ. ಆಯ್ಕೆ ಮಾಡಲಾದ ಯೋಜನೆ ಆಧರಿಸಿ ವಾರ್ಷಿಕ ಪ್ರೀಮಿಯಂ 436 ರೂ. ಗಳಿದ್ದು, ಚಂದಾದಾರರ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ಮೇ 31ರಂದು ಪ್ರೀಮಿಯಂ ಮೊತ್ತವು ಸ್ವಯಂ ಕಡಿತವಾಗುತ್ತದೆ.
ಒಂದು ವೇಳೆ ನಿಮಗೆ ಪಿಎಂಜೆಜೆವೈ ಯೋಜನೆಯಲ್ಲಿ ಮುಂದುವರೆಯಲು ಇಷ್ಟವಿಲ್ಲದಿದ್ದಲ್ಲಿ ನೀವು ಈ ಸ್ವಯಂ-ಕಡಿತದ ಪ್ರಕ್ರಿಯೆಯನ್ನು ನೀವು ತಪ್ಪಿಸಬಹುದಾಗಿದೆ. ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ನಿಮ್ಮ ಖಾತೆಯಿಂದ ಪಿಎಂಜೆಜೆವೈಗೆ ಪ್ರೀಮಿಯಂ ಕಡಿತಗೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಲು ಕೋರಬಹುದಾಗಿದೆ. ಈ ಮೂಲಕ ನೀವು ಪಿಎಂಜೆಜೆವೈ ಚಂದಾದಾರಿಕೆಯನ್ನು ತ್ಯಜಿಸಬಹುದಾಗಿದೆ.