ದೀಪಾವಳಿ ಹತ್ತಿರ ಬರ್ತಿದೆ. ಅ. 23 ರಂದು ಧನ್ ತೇರಸ್ ಆಚರಿಸಲಾಗ್ತಿದೆ. ಧನ ತ್ರಯೋದಶಿಯನ್ನು ಆಡು ಭಾಷೆಯಲ್ಲಿ ಧನ್ ತೇರಸ್ ಎಂದು ಕರೆಯಲಾಗುತ್ತದೆ.
ವ್ಯಾಪಾರಿಗಳಿಗೆ ಧನ್ ತೇರಸ್ ಬಹಳ ಮಹತ್ವವಾದ ದಿನ. ಅಂದು ತಿಜೋರಿ ಪೂಜೆ ನಡೆಯುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಜನರು ಚಿನ್ನ, ಬೆಳ್ಳಿ ಸೇರಿದಂತೆ ವಸ್ತುಗಳನ್ನು ಅಂದು ಮನೆಗೆ ತರ್ತಾರೆ. ಆದ್ರೆ ಕೆಲವೊಂದು ವಸ್ತುಗಳನ್ನು ಧನ್ ತೇರಸ್ ದಿನ ಮನೆಗೆ ತಂದ್ರೆ ಮಂಗಳವಾಗುವ ಬದಲು ಅಶುಭ ಘಟನೆ ಘಟಿಸುತ್ತದೆ.
ಕಬ್ಬಿಣದ ಪಾತ್ರೆಯನ್ನು ಧನ್ ತೇರಸ್ ದಿನ ಖರೀದಿ ಮಾಡಬಾರದು. ಕಬ್ಬಿಣದ ಪಾತ್ರೆ ಅವಶ್ಯಕತೆಯಿರುವವರು ಹಿಂದಿನ ದಿನವೇ ಖರೀದಿ ಮುಗಿಸಿ.
ಅಂಗಡಿಯಲ್ಲಿ ಪಾತ್ರೆ ಖರೀದಿ ಮಾಡುವ ವೇಳೆ ದಾನ್ಯಗಳನ್ನು ಉಚಿತವಾಗಿ ನೀಡುವುದಿಲ್ಲ ನಿಜ. ಆದ್ರೆ ಧನ್ ತೇರಸ್ ದಿನ ಖಾಲಿ ಪಾತ್ರೆಯನ್ನು ಮನೆಗೆ ತರಬಾರದು. ಹಾಗಾಗಿ ಪಾತ್ರೆಯನ್ನು ಮನೆಯೊಳಗೆ ತರುವ ಮೊದಲು ನೀರು ತುಂಬಿಸಿ ತನ್ನಿ.
ಧನ್ ತೇರಸ್ ದಿನ ಉಕ್ಕಿನ ಪಾತ್ರೆ ಖರೀದಿ ಮಾಡಬೇಡಿ. ತಾಮ್ರ ಅಥವಾ ಕಂಚಿನ ಪಾತ್ರೆಯನ್ನು ಖರೀದಿ ಮಾಡಿ.
ಧನ್ ತೇರಸ್ ದಿನದಂದು ಕಪ್ಪು ವಸ್ತುಗಳನ್ನು ಮನೆಗೆ ತರಬಾರದು. ಧನ್ ತೇರಸ್ ಬಹಳ ಶುಭ ದಿನ. ಕಪ್ಪು ಬಣ್ಣವನ್ನು ಯಾವಾಗಲೂ ದುರದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಧನ್ ತೇರಸ್ ದಿನದಂದು ಚಾಕುಗಳು, ಕತ್ತರಿ ಮತ್ತು ಇತರ ತೀಕ್ಷ್ಣವಾದ ಶಸ್ತ್ರಾಸ್ತ್ರಗಳನ್ನು ಖರೀದಿಸಬಾರದು.
ಅನೇಕರು ಧನ್ ತೇರಸ್ ಶುಭ ದಿನವಾದ ಕಾರಣ ಕಾರು ಖರೀದಿಗೆ ಮುಂದಾಗ್ತಾರೆ. ಆದ್ರೆ ಅದು ತಪ್ಪು. ನಂಬಿಕೆಗಳ ಪ್ರಕಾರ, ಕಾರನ್ನು ಧನ್ ತೇರಸ್ ದಿನ ಮನೆಗೆ ತರಬೇಕಾದರೆ, ಒಂದು ದಿನ ಮುಂಚಿತವಾಗಿ ಹಣ ಪಾವತಿ ಮಾಡಬೇಕು.
ಧನ್ ತೇರಸ್ ದಿನ ಚಿನ್ನವನ್ನು ಖರೀದಿಸಲಾಗುತ್ತದೆ. ಆದರೆ ಈ ದಿನದಂದು ನಕಲಿ ಆಭರಣಗಳು, ನಾಣ್ಯಗಳನ್ನು ತಪ್ಪಾಗಿ ಮನೆಗೆ ತರಬಾರದು.
ತೈಲ ಅಥವಾ ತೈಲ ಉತ್ಪನ್ನಗಳಾದ ತುಪ್ಪವನ್ನು ಧನ್ ತೇರಸ್ ದಿನ ತರಬಾರದು. ಧನ್ ತೇರಸ್ ದಿನ ದೀಪ ಬೆಳಗಲು ಎಣ್ಣೆ, ತುಪ್ಪ ಬೇಕು. ಹಾಗಾಗಿ ಒಂದು ದಿನ ಮೊದಲೇ ಖರೀದಿ ಮಾಡಬೇಕು.
ಗಾಜು ರಾಹುಗೆ ಸಂಬಂಧಿಸಿದ್ದು ಎಂದು ನಂಬಲಾಗಿದೆ. ಆದ್ದರಿಂದ ಅದನ್ನು ಧನ್ ತೇರಸ್ ದಿನದಂದು ಖರೀದಿಸಬಾರದು.