ಯೋಗ ಅಭ್ಯಾಸ ಮಾಡುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಂಧಿವಾತ, ಕೀಲುನೋವು, ಬೆನ್ನು ನೋವು ಸೇರಿದಂತೆ ವಿವಿಧ ರೀತಿಯ ದೀರ್ಘಕಾಲದ ನೋವು ನಿವಾರಿಸಲು ಯೋಗ ಸಹಕಾರಿಯಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಬದಲು ಯೋಗದ ಮೂಲಕ ಪರಿಹಾರ ಕಂಡುಕೊಳ್ಳಬಹುದು.
*ಶವಾಸನ: ಇದರಲ್ಲಿ ನೀವು ಬೆನ್ನಿನ ಮೇಲೆ ಮಲಗಿ ಉಸಿರಾಡಬೇಕು. ಇದು ಆಳವಾದ ಪರಿಣಾಮವನ್ನು ಬೀರುತ್ತದೆ. ಇದು ನಿಮಗೆ ವಿಶ್ರಾಂತಿ, ಒತ್ತಡ ನಿವಾರಣೆ, ಮತ್ತು ನರಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಬೆನ್ನಿನ ಮೇಲೆ ಮಲಗಿ ನಿಮ್ಮ ಪಾದಗಳನ್ನು ಸೊಂಟದ ಅಗಲಕ್ಕೆ ತಂದು ಕೈಗಳನ್ನು ನಿಮ್ಮ ದೇಹದಿಂದ ಸ್ವಲ್ಪ ದೂರವಿಟ್ಟು ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯಿರಿ.
*ಸ್ಟ್ಯಾಂಡಿಂಗ್ ಸೈಡ್ ಸ್ಟ್ರೆಚ್ : ಇದು ತೋಳುಗಳ ಸ್ನಾಯುಗಳನ್ನು ಹಿಗ್ಗಿಸುತ್ತದೆ. ನಿಂತುಕೊಂಡು ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಅಂಗೈಗಳನ್ನು ಒಟ್ಟಿಗೆ ತಂದು ಸೊಂಟದ ಒಂದು ಬದಿಗೆ ತಳ್ಳಿರಿ. ಈ ಭಂಗಿಯಲ್ಲಿ 5 ನಿಮಿಷವಿದ್ದು, ಬಳಿಕ ಪ್ರಾರಂಭಿಕ ಸ್ಥಾನಕ್ಕೆ ಬಂದು ಮತ್ತೆ ಇನ್ನೊಂದು ಬದಿಯಲ್ಲಿ ಪುನರಾವರ್ತಿಸಿ.
*ಬಡ್ಡಾಕೊನಾಸನ : ಬೆನ್ನುನೋವಿನಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಹಾಗೇ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಆರಾಮವಾಗಿ ಕುಳಿತು ಪಾದಗಳನ್ನು ಸೊಂಟದ ಹತ್ತಿರ ತಂದು ಕೈಗಳಿಂದ ಅವುಗಳನ್ನು ಹಿಡಿದುಕೊಳ್ಳಿ. ಮೊಣಕಾಲು ನೆಲದ ಮೇಲೆ ವಿಶ್ರಾಂತಿ ಪಡೆಯಲಿ. ನಿಮ್ಮ ದೇಹ ಮತ್ತು ಕುತ್ತಿಗೆ ನೇರವಾಗಿ ಇರಬೇಕು. ನಿಮ್ಮ ಕಣ್ಣುಗಳನ್ನು ಮುಚ್ಚಿ ಸ್ವಲ್ಪ ಹೊತ್ತು ಇದೇ ಭಂಗಿಯಲ್ಲಿ ಇರಿ.