ಮೇಷ : ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಖರ್ಚು ವೆಚ್ಚದ ಮೇಲೆ ಹಿಡಿತವಿರಲಿ. ವ್ಯಾಪಾರದಲ್ಲಿ ಸಾಧಾರಣ ಲಾಭವನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಶುಭ ಸುದ್ದಿ ಕಾದಿದೆ.
ವೃಷಭ : ನಕರಾತ್ಮಕ ಚಿಂತನೆಗಳನ್ನ ಬಿಟ್ಟುಬಿಡಿ. ಇದರಿಂದ ನಿಮ್ಮ ಮನಸ್ಸೇ ಹಗುರ ಎನಿಸಲಿದೆ. ಆಪ್ತರೊಂದಿಗೆ ನಿಮ್ಮ ನೋವನ್ನ ಹಂಚಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ನೀವು ಸಂತುಷ್ಟರಾಗುತ್ತೀರಿ.
ಮಿಥುನ : ಕುಟುಂಬ ಸದಸ್ಯರೊಂದಿಗೆ ಮಧುರ ಕ್ಷಣವನ್ನ ಕಳೆಯುತ್ತೀರಿ. ಜವಳಿ ಉದ್ಯಮಿಗಳಿಗೆ ಲಾಭ ಕಾದಿದೆ. ರಾಜಕಾರಣಿಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಪಡೆದುಕೊಳ್ಳಲಿದ್ದಾರೆ.
ಕಟಕ : ನನ್ನಿಂದಲೇ ಇದೆಲ್ಲ ಸಾಧ್ಯವಾಗುತ್ತಿದೆ ಎಂಬ ಅಹಂ ಭಾವನೆಯನ್ನು ಬಿಟ್ಟುಬಿಡಿ. ಅಹಂಕಾರವನ್ನ ದೂರ ಮಾಡಿದಷ್ಟೂ ಜನರು ನಿಮಗೆ ಆಪ್ತರಾಗಲಿದ್ದಾರೆ . ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಧಾರ್ಮಿಕ ಕಾರ್ಯದಲ್ಲಿ ಒಲವು ತೋರಲಿದ್ದೀರಿ.
ಸಿಂಹ : ಉದಾಸೀನ ಬುದ್ಧಿಯಿಂದಾಗಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಪೋಷಕರ ಆರೋಗ್ಯದ ಮೇಲೆ ಕಾಳಜಿ ಇರಲಿ. ಉದ್ಯೋಗಾವಕಾಶಕ್ಕಾಗಿ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಇದೆ.
ಕನ್ಯಾ : ಕೋರ್ಟ್- ಕಚೇರಿ ಕೆಲಸದಲ್ಲಿ ನಿಮಗೆ ಇಂದು ಜಯ ಪ್ರಾಪ್ತಿಯಾಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಇದು ಶುಭದಿನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ. ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುತ್ತೀರಿ.
ತುಲಾ: ಕಚೇರಿಗೆ ಹೊರಡುವ ಮುನ್ನ ಎಲ್ಲಾ ದಾಖಲೆಗಳನ್ನ ಜೋಡಿಸಿಟ್ಟುಕೊಳ್ಳಿ. ಶಿವನಾಮ ಸ್ಮರಣೆ ಮಾಡಿ. ನಿಮ್ಮ ಮೇಲೆ ಬಂದ ಅಪವಾದವೆಲ್ಲವೂ ದೂರಾಗಲಿದೆ.
ವೃಶ್ಚಿಕ : ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡಲಿದೆ. ವಾಹನ ಖರೀದಿ ಮಾಡುವರಿಗೆ ಇದು ಶುಭ ದಿನ . ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ದಿನವಲ್ಲ.
ಧನು : ನವದಂಪತಿಗೆ ಸಂತಾನ ಭಾಗ್ಯವಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸವು ಸುಲಲಿತವಾಗಿ ನಡೆಯಲಿದೆ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿ ಇರಲಿದೆ. ಹಿತಶತ್ರುಗಳ ಕಾಟವಿದೆ. ಶಿವನಾಮ ಸ್ಮರಣೆ ಮಾಡಿ.
ಮಕರ : ಪದೇ ಪದೇ ಸಂಗಾತಿಯು ನಿಮಗೆ ಕಿರಿಕಿರಿ ಉಂಟು ಮಾಡೋದ್ರಿಂದ ಮನಸ್ಸಿಗೆ ಅಶಾಂತಿ ಉಂಟಾಗಲಿದೆ. ವ್ಯಾಪಾರದಲ್ಲಿ ಪದೇ ಪದೇ ಉಂಟಾಗುತ್ತಿರುವ ಸೋಲು ನಿಮ್ಮ ಹತಾಶೆಗೆ ದೂಡಲಿದೆ. ನೀವು ಮಾಡದ ತಪ್ಪಿಗೆ ದೋಷಿ ಸ್ಥಾನದಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಲಿದೆ.
ಕುಂಭ: ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ನಿಮ್ಮ ಕಠಿಣ ದಿನಗಳಿಗೆ ಸ್ನೇಹಿತರು ಹೆಗಲು ನೀಡಲಿದ್ದಾರೆ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿ ಇರಲಿದೆ.
ಮೀನ: ಈ ದಿನ ನಿಮಗೆ ಶಾಂತಿಯಿಂದ ಸಾಗಲಿದೆ. ಆತ್ಮೀಯರ ಸಲಹೆಯಿಂದ ಸರಿ ದಾರಿಯಲ್ಲಿ ಸಾಗಲಿದ್ದೀರಿ. ದೈವಾನುಗ್ರಹವಿದೆ. ಹೊಸ ಕಚೇರಿಯ ವಾತಾವರಣ ನಿಮಗೆ ಹಿಡಿಸಲಿದೆ.