ಇಂದಿನ ದಿನಗಳಲ್ಲಿ ಶಾಸ್ತ್ರ, ಜ್ಯೋತಿಷ್ಯ ನಂಬುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವೇ ಕೆಲವು ಮಂದಿ ಶುಭ-ಅಶುಭ ಸಂಕೇತಗಳ ಬಗ್ಗೆ ತಿಳಿದಿದ್ದಾರೆ. ಹಾಗೆ ಕೆಲವೇ ಕೆಲವು ಮಂದಿ ಇದನ್ನು ನಂಬುತ್ತಾರೆ. ಶುಭ-ಅಶುಭ ಸಂಕೇತ ನೀಡುವ ವಿಷ್ಯದಲ್ಲಿ ಮೇಕೆ ಕೂಡ ಸೇರಿದೆ.
ಮೇಕೆ ಶಬ್ದವನ್ನು ಎಡಭಾಗದಲ್ಲಿ ಕೇಳಿದರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತು, ಮಕ್ಕಳು, ಮಹಿಳೆಯರು, ಆಸ್ತಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತೆ ಎಂಬುದರ ಮುನ್ಸೂಚನೆಯಾಗಿದೆ.
ರಸ್ತೆ ಮಧ್ಯೆ ಮೇಕೆ ಕಂಡು ಬಂದರೆ ಅದು ನಷ್ಟದ ಸಂಕೇತ. ಇದು ಹಣ ನಷ್ಟ ಮತ್ತು ಆರೋಗ್ಯ ನಷ್ಟದ ಸಂಕೇತವಾಗಿದೆ.
ಮೇಕೆ ಬಲಭಾಗದಲ್ಲಿ ಕಂಡು ಬಂದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಕುರಿಮರಿಯನ್ನು ಪೋಷಿಸುವ ವ್ಯಕ್ತಿಯ ಬಲಭಾಗದಲ್ಲಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಆಹಾರ ಧಾನ್ಯಗಳ ಸಮಸ್ಯೆ ದೂರವಾಗಲಿದೆ ಎಂಬುದು ಇದ್ರ ಸಂಕೇತವಾಗಿದೆ.
ರಾತ್ರಿ ಸಮಯದಲ್ಲಿ ಮೇಕೆ ಕೆಟ್ಟ ಧ್ವನಿಯಲ್ಲಿ ಕೂಗಿದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮೇಕೆ ಮೈ ಮೇಲೆ ಚಿಟ್ಟೆಗಳು ಕುಳಿತ್ರೆ ಮಳೆಯಾಗಲಿದೆ ಎಂದರ್ಥ. ಮೇಕೆ ಸಂತೋಷವಾಗಿದ್ದರೆ ಅದು ಶುಭ ಸೂಚಕ.