ಥೈರಾಯ್ಡ್ ಸಮಸ್ಯೆ ಇರುವವರು ಯಾವ ಆಹಾರ ಸೇವನೆ ಮಾಡುವುದು ಸೂಕ್ತ ಎಂದು ತಿಳಿದುಕೊಳ್ಳೋಣ.
ಥೈರಾಯ್ಡ್ ಗ್ರಂಥಿಯು ಆರೋಗ್ಯವಾಗಿರಲು ಪ್ರತಿ ನಿತ್ಯ ಕನಿಷ್ಠ ಮೂವತ್ತು ನಿಮಿಷ ವ್ಯಾಯಾಮ, ಯೋಗಾಸನ ಅಥವಾ ವಾಕಿಂಗ್ ಮಾಡುವುದು ಬಹಳ ಮುಖ್ಯ. ಅದರೊಂದಿಗೆ ಆರೋಗ್ಯಕರ ಆಹಾರವನ್ನೂ ಸೇವನೆ ಮಾಡಬೇಕು.
ಥೈರಾಯ್ಡ್ ಸಮಸ್ಯೆ ಇರುವವರಿಗೆ ಬೀಟ್ರೂಟ್ ಉತ್ತಮ ಆಹಾರ. ಬೀಟ್ರೂಟ್ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಬೀಟ್ರೂಟ್ ನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಕರಗುವ ನಾರು ಇದ್ದು, ಇದು ಥೈರಾಯ್ಡ್ ಗ್ರಂಥಿಯ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.
ಪೈನಾಪಲ್ ಹಣ್ಣು ಥೈರಾಯ್ಡ್ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಇದರಲ್ಲಿ ಇರುವ ಸಮೃದ್ದವಾದ ನ್ಯೂಟ್ರಿಷನ್ ಮತ್ತು ಅಗತ್ಯವಾದ ಪೌಷ್ಟಿಕಾಂಶಗಳು ಥೈರಾಯ್ಡ್ ಸಮಸ್ಯೆಗೆ ಒಳ್ಳೆಯದು. ಇದರಲ್ಲಿ ವಿಟಮಿನ್ ಕೆ ಮತ್ತು ಎ ಜೊತೆಗೆ ಸಮೃದ್ಧ ಕ್ಯಾಲ್ಸಿಯಂ ಕೂಡ ಅಡಗಿದೆ.
ಸೇಬು ಹಣ್ಣು ಥೈರಾಯ್ಡ್ ಸಮಸ್ಯೆಗೆ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಮತ್ತು ವಿಟಮಿನ್ ಬಿ ಇದ್ದು ಥೈರಾಯ್ಡ್ ಗ್ರಂಥಿಯ ಹಾರ್ಮೋನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ.