ಬೊಜ್ಜು ಕರಗಿಸಿ ತೂಕ ಇಳಿಸಿಕೊಳ್ಳುವುದು ಎಷ್ಟು ಕಷ್ಟಾನೋ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ಕೆಲಸ.
ತಜ್ಞರ ಪ್ರಕಾರ ಜೀವನಶೈಲಿ ಮತ್ತು ಆಹಾರದ ಪದ್ಧತಿಯಿಂದ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ತೂಕ ಕಡಿಮೆ ಮಾಡಿಕೊಳ್ಳಬಹುದಂತೆ.
ಹಾಗಾಗಿ ಯಾವುದೇ ಅಪಾಯಗಳಿಲ್ಲದೇ ದೇಹದ ತೂಕವನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ.
*ತೆಳ್ಳಗಿನ ಸ್ನಾಯುಗಳು ಬೆಳವಣಿಗೆ ಹೊಂದಲು ಪ್ರೋಟೀನ್ ಬಹಳ ಮುಖ್ಯ. ಹಾಗಾಗಿ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಿ. ಅಂದರೆ ಹಾಲು, ಮೊಟ್ಟೆ, ಮೀನುಗಳಂತಹ ಪ್ರೋಟೀನ್ ಭರಿತ ಆಹಾರ ಸೇವಿಸಿ.
*ಪ್ರತಿದಿನ ವ್ಯಾಯಾಮ ಮಾಡಿ. ಇದರಿಂದ ಸ್ನಾಯುಗಳು ಬಲಿಷ್ಠವಾಗುತ್ತವೆ. ತೂಕ ಹೆಚ್ಚಾಗಲು ಸಹಕಾರಿಯಾಗಿದೆ. ಇದರಿಂದ ದೇಹವು ಆಹಾರದಲ್ಲಿನ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುತ್ತವೆ.
*ಹಾಗೇ ಪ್ರತಿದಿನ 5 ಬಾದಾಮಿಯನ್ನು ನೆನೆಸಿ ತಿನ್ನಿ, ಮತ್ತು ಪ್ರತಿದಿನ ರಾತ್ರಿ 2 ಬಾಳೆಹಣ್ಣು ಮತ್ತು ಒಂದು ಗ್ಲಾಸ್ ಹಾಲನ್ನು ತಪ್ಪದೇ ಸೇವಿಸಿ. ಇದು ತೂಕ ಹೆಚ್ಚಿಸಲು ಸಹಕಾರಿಯಾಗಿದೆ.