
ಕೋಲಾರ: ಟೊಮೆಟೊ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಟೊಮೆಟೊ ಬೆಳೆದಿರುವ ರೈತರಿಗೆ ವರದಾನವಾಗಿದೆ. ಕೊಂಡುಕೊಳ್ಳುವ ಗ್ರಾಹಕರ ಜೇಬಿಗೆ ಮಾತ್ರ ಕತ್ತರಿ ಬಿದ್ದಿದೆ. ಈ ನಡುವೆ ಕೋಲಾರದಿಂದ ಟೊಮೆಟೊ ಹೊತ್ತು ದೆಹಲಿಗೆ ಸಾಗುತ್ತಿದ್ದ ಲಾರಿಯೊಂದು ಆಂಧ್ರದ ಬಳಿ ಪಲ್ಟಿಯಾಗಿದ್ದು, ರಸ್ತೆ ತುಂಬೆಲ್ಲ ಟೊಮೆಟೊ ಚೆಲ್ಲಾಪಿಲ್ಲಿಯಾಗಿವೆ.
ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಟೊಮೆಟೊ ಕಳ್ಳರ ಹಾವಳಿ ಹೆಚ್ಚಾಗಿದ್ದು, ಈಗ ಟೊಮೆಟೊ ಲಾರಿಯೇ ಪಲ್ಟಿಯಾಗಿ ಬಿದ್ದಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಕೋಲಾರದಿಂದ ನೂರಾರು ಕ್ರೇಟ್ಸ್ ಟೊಮೆಟೊ ತುಂಬಿಕೊಂಡು ದೆಹಲಿಗೆ ತೆರಳುತ್ತಿದ್ದ ಲಾರಿ ಆಂಧ್ರಪ್ರದೇಶದ ತೆಲಂಗಾಣದ ಆದಿಲ್ ಬಾದ್ ಜಿಲ್ಲೆ ಬಳಿ ಪಲ್ಟಿಯಾಗಿದೆ. ಟೊಮೆಟೊ ಸಂಪೂರ್ಣ ರಸ್ತೆಪಾಲಾಗಿದ್ದು, ಕಳ್ಳರ ಕಾಟದ ಭೀತಿ ಶುರುವಾಗಿದೆ.
ರಸ್ತೆ ತುಂಬೆಲ್ಲ ಬಿದ್ದಿರುವ ಟೊಮೆಟೊ ಹಾಗೂ ಲಾರಿ ಕಾಯಲು ಮೂವರು ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನೊಂದೆಡೆ ಲಾರಿ ಎತ್ತುವ ಕಾರ್ಯಾಚರಣೆಯೂ ನಡೆದಿದೆ.