
MG ಮೋಟಾರ್ ಇಂಡಿಯಾ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸಿದೆ. ಕಾಮೆಟ್ EV ಸರಣಿಯ ಎಲ್ಲಾ ರೂಪಾಂತರಗಳ ಬೆಲೆಗಳನ್ನು ಕೂಡ ಘೋಷಿಸಿದೆ. ಎಲ್ಲಾ ಹೊಸ MG ಕಾಮೆಟ್ EV ಬೆಲೆಗಳು 7.98 ಲಕ್ಷ ರೂಪಾಯಿಯಿಂದ ಆರಂಭವಾಗಲಿವೆ. ಪ್ರೀಮಿಯಂ ಕಾರಿನ ಬೆಲೆ 9.98 ಲಕ್ಷದವರೆಗೆ ಇದೆ. ಹಾಗಾಗಿ ಇದು ಭಾರತದಲ್ಲಿ ಲಭ್ಯವಿರುವ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಎನಿಸಿಕೊಂಡಿದೆ.
ಇದರ ಟಾಪ್-ಸ್ಪೆಕ್ ರೂಪಾಂತರದ ಬೆಲೆ ಟಾಟಾ ಟಿಯಾಗೊ EVಯ ಟಾಪ್-ಎಂಡ್ ರೂಪಾಂತರಕ್ಕಿಂತ 2 ಲಕ್ಷದಷ್ಟು ಕಡಿಮೆ ಇದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕಾಮೆಟ್ ಇವಿ, ಟಾಟಾ ಟಿಯಾಗೊ EVಯೊಂದಿಗೆ ಸ್ಪರ್ಧಿಸಲಿದೆ. ಟಿಯಾಗೊ ಇವಿ ಬೆಲೆ 8.69 ಲಕ್ಷದಿಂದ ಆರಂಭವಾಗಿ 11.99 ಲಕ್ಷದವರೆಗಿದೆ. MG Comet EV Pace ಕಾರಿನ ಬೆಲೆ 7.98 ಲಕ್ಷ ರೂಪಾಯಿ ಇದ್ದರೆ, MG Comet EV Play ಕಾರಿನ ಬೆಲೆಯನ್ನು 9.28 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ.
MG Comet EV Plush ಕಾರಿನ ಬೆಲೆ 9.98 ಲಕ್ಷ ರೂಪಾಯಿ ಇದೆ. ಆದಾಗ್ಯೂ ಇವುಗಳು ಪರಿಚಯಾತ್ಮಕ ಬೆಲೆಗಳಾಗಿದ್ದು, ಮೊದಲ 5,000 ಖರೀದಿದಾರರಿಗೆ ಮಾತ್ರ ಮಾನ್ಯವಾಗಿರುತ್ತವೆ. ಮೇ 15 ಬುಕ್ಕಿಂಗ್ ಪ್ರಾರಂಭವಾಗಲಿದೆ. ಮೇ 22ರಿಂದಲೇ ಕಾರುಗಳನ್ನು ಕಂಪನಿ ವಿತರಣೆ ಮಾಡಲಿದೆ. MG ಕಾಮೆಟ್ 17.3 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಪ್ರತಿ ಪೂರ್ಣ ಚಾರ್ಜ್‌ಗೆ 230 ಕಿಮೀ ಡ್ರೈವಿಂಗ್ ರೇಂಜ್ ನೀಡಲಿದೆ. ಇದು ಒಂದೇ ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆಯುತ್ತದೆ.
ಸಾಮಾನ್ಯ AC ಚಾರ್ಜರ್ ಅನ್ನು ಬಳಸಿಕೊಂಡು ಕಾಮೆಟ್ EV ಅನ್ನು 7 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. DC ಫಾಸ್ಟ್ ಚಾರ್ಜಿಂಗ್ ಬೆಂಬಲ ಇದರಲ್ಲಿ ಲಭ್ಯವಿಲ್ಲ. ಇದು 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.25 ಇಂಚಿನ ಇನ್ಫೋಟೈನ್ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದಲ್ಲಿ 3 ಪಾಯಿಂಟ್ ಸೀಟ್ ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾTPMS ಮತ್ತು ISOFIX ಚೈಲ್ಡ್ ಸೀಟ್‌ಗಳಂತಹ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ.