ಜೇನುತುಪ್ಪದ ಬ್ರಾಂಡ್ ಹೆಸರು ಸೂಚಿಸಿದವರಿಗೆ ಬಂಪರ್ ಬಹುಮಾನ; ಇಲ್ಲಿದೆ ವಿವರ

ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಉತ್ಪಾದನೆಯಾಗುವ ಜೇನುತುಪ್ಪವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದಕ್ಕಾಗಿ ಬ್ರಾಂಡ್ ಹೆಸರು ಸೂಚಿಸಲು ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.

ಆಸಕ್ತರು ಫೆಬ್ರವರಿ 10 ರ ಒಳಗಾಗಿ ತೋಟಗಾರಿಕೆ ಇಲಾಖೆಯ ವೆಬ್ಸೈಟ್ horticulturedir.karnataka.gov.in ಗೆ ಭೇಟಿ ನೀಡಿ ಬ್ರಾಂಡ್ ಹೆಸರನ್ನು ಸೂಚಿಸಬಹುದಾಗಿದೆ. ಒಟ್ಟು ಅತ್ಯುತ್ತಮ ಐದು ಬ್ರಾಂಡ್ ಹೆಸರುಗಳನ್ನು ಸೂಚಿಸಲು ಕೋರಲಾಗಿದೆ.

ಐದು ಬ್ರಾಂಡ್ ಹೆಸರುಗಳನ್ನು ಸೂಚಿಸಿದವರ ಪೈಕಿ ಪ್ರಥಮ ವಿಜೇತರಿಗೆ 25,000 ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತಿದ್ದು, ಉಳಿದ ನಾಲ್ಕು ವಿಜೇತರಿಗೆ ಮೆಚ್ಚುಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ honeybrandcontest.kar@gmail.com ಸಂಪರ್ಕಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read