ಏಕದಿನ ವಿಶ್ವಕಪ್ ಗಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದು ಇದಕ್ಕೂ ಮುಂಚೆ ಕ್ವಾಲಿಫೈಯರ್ ಪಂದ್ಯಗಳನ್ನು ನಡೆಸಲಿದ್ದಾರೆ. ಜೂನ್ 18ರಿಂದ ಈ ಪಂದ್ಯಗಳು ಪ್ರಾರಂಭವಾಗುತ್ತಿದ್ದು ಐಸಿಸಿ ಏಕದಿನ ರಾಂಕಿಂಗ್ ನಲ್ಲಿ ಕೆಳಗಿರುವ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡ ಕೂಡ ಇದರಲ್ಲಿ ಕಣಕ್ಕಿಳಿಯುತ್ತಿವೆ. ಒಟ್ಟಾರೆ 10 ತಂಡಗಳ ನಡುವೆ ಈ ಪಂದ್ಯಗಳು ನಡೆಯಲಿವೆ.
ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ನ ಗ್ರೂಪ್ ಎ ನಲ್ಲಿ ಜಿಂಬಾಂಬೆ, ನೇಪಾಳ್, ವೆಸ್ಟ್ ಇಂಡೀಸ್, ಯುಎಸ್ಎ ಹಾಗೂ ನೆದರ್ಲ್ಯಾಂಡ್ ತಂಡಗಳಿದ್ದು, ಗ್ರೂಪ್ ಬೀ ನಲ್ಲಿ ಓಮನ್, ಐರ್ಲ್ಯಾಂಡ್, ಶ್ರೀಲಂಕಾ, ಯು ಎ ಇ ಹಾಗೂ ಸ್ಕಾಟ್ಲ್ಯಾಂಡ್ ಹೋರಾಡಲಿವೆ. ಹೆಚ್ಚಿನ ಅಂಕ ಪಡೆದ ತಂಡಗಳು ಪ್ರಮುಖ ವಿಶ್ವಕಪ್ ಗೆ ಎಂಟ್ರಿ ಕೊಡಲಿವೆ.